ADVERTISEMENT

'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 10:43 IST
Last Updated 6 ನವೆಂಬರ್ 2019, 10:43 IST
   

ನವದೆಹಲಿ: ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು, ಹಾಗಂತ ರಸ್ತೆ ಅವರಿಗೆ ಸೇರಿದ್ದು ಎಂದು ಹೇಳುವಂತಿಲ್ಲ ಎಂದು ಹಿರಿಯ ವಕೀಲಸಿ.ಎಸ್ ವೈದ್ಯನಾಥನ್ ಹೇಳಿದ್ದಾರೆ.

ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆ ನಡೆದಿದ್ದು ರಾಮ ಲಲ್ಲಾ ವಿರಾಜಮಾನ್ ಪರ ವಾದಿಸಿದ ವೈದ್ಯನಾಥನ್ ಈ ರೀತಿ ಹೇಳಿದ್ದಾರೆ.

ಬಾಬರಿ ಕಟ್ಟಡದ ಒಳಗಿನ ವಿನ್ಯಾಸ ನೋಡಿದರೆ ಅದು ಇಸ್ಲಾಂ ಧರ್ಮದ ವಿಶ್ವಾಸಕ್ಕೆ ವಿರುದ್ಧವಾಗಿರುವುದಾಗಿದೆ. ಇಸ್ಲಾಂ ಧರ್ಮದಲ್ಲಿ ಪ್ರಾರ್ಥನಾ ಸ್ಥಳದಲ್ಲಿ ಮನುಷ್ಯ ಅಥವಾ ಪ್ರಾಣಿಯದ್ದಾಗಲೀರೂಪ ಇರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠದ ಮುಂದೆ ವೈದ್ಯನಾಥನ್ ವಾದಿಸಿದ್ದಾರೆ.
ಅದೇ ವೇಳೆ 1990ರಲ್ಲಿ ತೆಗೆದ ಚಿತ್ರವೊಂದನ್ನು ವೈದ್ಯನಾಥನ್ನ್ಯಾಯಪೀಠದ ಮುಂದಿಟ್ಟಿದ್ದಾರೆ.

ADVERTISEMENT

ರಾಮ ಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಿತ್ಯ ವಿಚಾರಣೆ ನಡೆಯುತ್ತಿದೆ.

ಆದಾಗ್ಯೂ, ಅಯೋಧ್ಯೆಯಲ್ಲಿ ದೇವಾಲಯವನ್ನು ನಾಶಮಾಡಿ ಬಾಬರಿ ಮಸೀದಿ ನಿರ್ಮಿಸಲಾಗಿದೆ. ಈ ಭೂಮಿ ಯಾರಿಗೂ ಸೇರಿದ್ದಲ್ಲ ಎಂದು ಹೇಳುವುದು ತಪ್ಪು. ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದರೆ ಅದು ಮಸೀದಿಯಾಗಿರಲ್ಲ. ಯಾಕೆಂದರೆ ಅದು ಷರಿಯತ್ ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದಿದ್ದಾರೆ ವೈದ್ಯನಾಥನ್.

ವಿವಾದಿತ ಭೂಮಿಯಲ್ಲಿರುವ ಆ ಕಟ್ಟಡದ 14 ಕಂಬಗಳಲ್ಲಿ ಹಿಂದೂ ದೇವರ ಸಂಕೇತಗಳಿವೆ ಎಂದು 1950ರಲ್ಲಿ ಸಲ್ಲಿಸಿದ್ದ ಫೈಜಾಬಾದ್ ಕಮಿಷನರ್ ವರದಿಯನ್ನುಉಲ್ಲೇಖಿಸಿದ ವೈದ್ಯನಾಥನ್, ಕಂಬಗಳಲ್ಲಿ ಹಿಂದೂ ದೇವರ ಸಂಕೇತಗಳಿರುವಾದ ಅದು ಮಸೀದಿಯಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.