ಅಯೋಧ್ಯೆ ರಾಮಮಂದಿರ
ಚಿತ್ರ ಕೃಪೆ: ShriRamTeerth
ಅಯೋಧ್ಯೆ: ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರಿಂದ ₹3 ಸಾವಿರ ಕೋಟಿಗೂ ಹೆಚ್ಚು ದೇಣಿಗೆ ಬಂದಿದೆ ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಬುಧವಾರ ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಯೋಜನೆಯ ಒಟ್ಟು ಮೊತ್ತ ₹1,800 ಕೋಟಿ. ಭಕ್ತರಿಂದ ₹3 ಸಾವಿರ ಕೋಟಿ ಹಣ ಬಂದಿದೆ ಎಂದು ತಿಳಿಸಿದ್ದಾರೆ.
2022ರಲ್ಲಿ ಧನಸಹಾಯಕ್ಕೆ ಅಭಿಯಾನ ಆರಂಭವಾದಾಗಿನಿಂದ ದೇಶದಾದ್ಯಂತ ಇರುವ ಭಕ್ತರು ದೇಣಿಗೆ ನೀಡಿದ್ದಾರೆ. ಎಲ್ಲಾ ದಾನಿಗಳನ್ನು ನ.25ರಂದು ನಡೆಯುವ ಧ್ವಜಾರೋಹಣಕ್ಕೆ ಆಹ್ವಾನಿಸಲಾಗಿವುದು. ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿರುತ್ತಾರೆ. ಈ ಭೇಟಿಯಲ್ಲಿ ಪ್ರಧಾನಿಯವರು ದೇವಾಲಯದ 70 ಎಕರೆ ಸಂಕೀರ್ಣದಲ್ಲಿರುವ ಶೇಶವತಾರ ದೇವಾಲಯ, ಸಪ್ತ ಮಂಟಪ ಸೇರಿ ಎಲ್ಲ ದೇವಾಲಯಗಳಿಗೂ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಗುಲದ ಒಳಭಾಗದಲ್ಲಿ 5 ರಿಂದ 8 ಸಾವಿರ ಭಕ್ತರು ಏಕಕಾಲದಲ್ಲಿ ಸೇರಬಹುದು. ಧ್ವಜಾರೋಹಣ ಕಾರ್ಯಕ್ರಮಕ್ಕೆ 8 ಸಾವಿರ ಜನರಿಗೆ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಮಮಂದಿರ ನಿರ್ಮಾಣ ಕಾರ್ಯ ಮುಗಿದಿದೆ ಎಂದು ಸೋಮವಾರ ರಾಮ ಮಂದಿರ ಟ್ರಸ್ಟ್ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.