ADVERTISEMENT

ಐಎಸ್‌ಐ ಚಟುವಟಿಕೆ: ರಾಣಾ ಹಸ್ತಾಂತರದಿಂದ ಮತ್ತಷ್ಟು ಮಾಹಿತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 10:00 IST
Last Updated 20 ಜೂನ್ 2020, 10:00 IST
ಮುಂಬೈನ ತಾಜ್‌ ಹೊಟೇಲ್‌–ಸಂಗ್ರಹ ಚಿತ್ರ
ಮುಂಬೈನ ತಾಜ್‌ ಹೊಟೇಲ್‌–ಸಂಗ್ರಹ ಚಿತ್ರ   

ಮುಂಬೈ: ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತನಾವ್ವುರ್‌ ರಾಣಾನನ್ನು ಹಸ್ತಾಂತರಿಸಿದರೆ ಐಎಸ್‌ಐ ಚಟುವಟಿಕೆಗಳ ಬಗ್ಗೆ ಮತ್ತಷ್ಟು ವಿವರಗಳು ಸಿಗಲಿವೆ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಂ ಶನಿವಾರ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ಪ್ರಕರಣದಲ್ಲಿ ಅವರು ವಾದ ಮಂಡಿಸಿದ್ದರು.

‘ಭಾರತದಲ್ಲಿ ದೊಡ್ಡ ಪ್ರಮಾಣ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪ ರಾಣಾ ವಿರುದ್ಧ ಇದೆ. ಮುಂಬೈನಲ್ಲಿ ಉಗ್ರರಾ ದಾಳಿ ಕುರಿತಂತೆ ರಾಣಾಗೆ ಸಂಪೂರ್ಣ ಮಾಹಿತಿ ಇದೆ ಎಂಬುದನ್ನು ಪಾಕಿಸ್ತಾನ ಮೂಲದ ಅಮೆರಿಕದ ಉಗ್ರ ಡೇವಿಡ್‌ ಕೋಲ್ಮನ್‌ ಹೆಡ್ಲಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ’ ಎಂದು ನಿಕಂ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.