ADVERTISEMENT

ಗೋವಾ ರಾಜಕೀಯದಲ್ಲಿ ಬದಲಾವಣೆ: ರಾವುತ್‌ ಹೇಳಿಕೆಗೆ ಸಚಿವ ರಾಣೆ ತಿರುಗೇಟು

ಪಿಟಿಐ
Published 2 ಡಿಸೆಂಬರ್ 2019, 15:34 IST
Last Updated 2 ಡಿಸೆಂಬರ್ 2019, 15:34 IST

ಪಣಜಿ: ಮಹಾರಾಷ್ಟ್ರದಂತೆ ಕರಾವಳಿ ರಾಜ್ಯದ ರಾಜಕೀಯದಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗುವ ಬಗ್ಗೆ ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಅವರ ಹೇಳಿಕೆಗೆ ಗೋವಾ ಸಚಿವ ವಿಶ್ವಜಿತ್‌ ರಾಣೆ ತಿರುಗೇಟು ನೀಡಿದ್ದಾರೆ.

‘ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರ ನಾಯಕತ್ವದಲ್ಲಿ ಬಿಜೆಪಿಯ 27 ಶಾಸಕರು ವಿಶ್ವಾಸ ಹೊಂದಿದ್ದಾರೆ.ರಾಜಕೀಯ ಅಸ್ಥಿರತೆಗೆ ಯಾವುದೇ ಅವಕಾಶವಿಲ್ಲ. ಗೋವಾದಲ್ಲಿ ಶಿವಸೇನಾ ಒಬ್ಬ ಶಾಸಕನನ್ನೂ ಹೊಂದಿಲ್ಲ. ಆದರೂ, ಬಿಜೆಪಿ ಹೊರತಾದ ಮೈತ್ರಿಕೂಟ ರಚನೆ ಬಗ್ಗೆ ಶಿವಸೇನಾ ಹೇಳುತ್ತಿದೆ. ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಯಾವೊಬ್ಬ ಶಾಸಕರೂ ಶಿವಸೇನಾದಂಥ ಕೀಳುಮಟ್ಟದ ಪಾರ್ಟಿ ಜೊತೆಗೆ ಕೈಜೋಡಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಗೋವಾದಲ್ಲಿ ಬಿಜೆಪಿ ಅನೈತಿಕತೆಯಿಂದ ಅಧಿಕಾರಕ್ಕೆ ಬಂದಿದೆ. ಶೀಘ್ರದಲ್ಲಿಯೇ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ’ ಎಂದು ರಾವುತ್‌ ಅವರು ಕಳೆದ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಗೋವಾದ ಕೆಲವು ಶಾಸಕರಿಗೆ ಹೇಳಿದ್ದರು.

ADVERTISEMENT

ಮಹದಾಯಿ ನದಿ ನೀರಿನ ವಿವಾದ ಪ್ರಸ್ತಾಪಿಸಿದ ರಾಣೆ,ವಿರೋಧ ಪಕ್ಷವಾದ ಕಾಂಗ್ರೆಸ್‌ನ ಕೆಲವರು ಮಹದಾಯಿ ನದಿಯನ್ನೇ ನೋಡಿಲ್ಲ. ಆದರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.