ADVERTISEMENT

ರ‍್ಯಾ‍ಪಿಡ್‌–ಎಕ್ಸ್‌ ರೈಲಿನಲ್ಲಿ ಮಹಿಳೆಯರಿಗೆ ಮೀಸಲು ಬೋಗಿ

ಪಿಟಿಐ
Published 17 ಮೇ 2023, 15:46 IST
Last Updated 17 ಮೇ 2023, 15:46 IST
ರ‍್ಯಾಪಿಡ್‌–ಎಕ್ಸ್‌ ರೈಲುಗಳು 
ರ‍್ಯಾಪಿಡ್‌–ಎಕ್ಸ್‌ ರೈಲುಗಳು    

ನವದೆಹಲಿ: ‘ದೇಶದ ಮೊದಲ ಪ್ರಾದೇಶಿಕ ರೈಲು, ರ‍್ಯಾಪಿಡ್‌–ಎಕ್ಸ್‌ನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿಗಳನ್ನು ಮೀಸಲಿಡಲಾಗುತ್ತದೆ. ಮಹಿಳೆಯರ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬುಧವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

‘ಮಹಿಳೆಯರಿಗಾಗಿ ಮೀಸಲಿರುವ ಬೋಗಿಗಳು 72 ಆಸನ ಸಾಮರ್ಥ್ಯ ಹೊಂದಿರಲಿವೆ. ಈ ಬೋಗಿಗಳ ಕುರಿತಾದ ಮಾಹಿತಿ ಒದಗಿಸುವುದಕ್ಕಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ ಇತರೆ ಬೋಗಿಗಳಲ್ಲೂ ಮಹಿಳೆಯರಿಗೆ ಹೆಚ್ಚುವರಿಯಾಗಿ 10 ಆಸನಗಳನ್ನು ಮೀಸಲಿಡಲಾಗುತ್ತದೆ.  ಮಕ್ಕಳಿಗಾಗಿ ಪ್ರತಿ ನಿಲ್ದಾಣದಲ್ಲೂ ಡಯಾಪರ್‌ ಬದಲಿಸುವ ಕೇಂದ್ರಗಳನ್ನು ತೆರೆಯಲಾಗುತ್ತದೆ’ ಎಂದು ಹೇಳಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT