ADVERTISEMENT

5.2 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ ಮಹಿಳೆ:ತೀರಾ ಅಪರೂಪದ ಪ್ರಕರಣ ಎಂದ ವೈದ್ಯರು

ಪಿಟಿಐ
Published 5 ಸೆಪ್ಟೆಂಬರ್ 2025, 9:26 IST
Last Updated 5 ಸೆಪ್ಟೆಂಬರ್ 2025, 9:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಭೋಪಾಲ್‌: ಮಧ್ಯಪ್ರದೇಶದ ಜಬಲ್ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು 5.2 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ್ದು, ಇಂತಹ ಪ್ರಕರಣಗಳು ತೀರಾ ಅಪರೂಪದಲ್ಲಿ ಅಪರೂಪ ಎಂದು ವೈದ್ಯರು ಹೇಳಿದ್ದಾರೆ.

ರಂಜಿ ಪ್ರದೇಶದ ನಿವಾಸಿ ಆನಂದ್ ಚೌಕ್ಸೆ ಅವರ ಪತ್ನಿ ಶುಭಾಂಗಿಗೆ ಸಿಸೇರಿಯನ್ ಮೂಲಕ ಮಗು ಜನಿಸಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಭಾವನಾ ಮಿಶ್ರಾ ತಿಳಿಸಿದ್ದಾರೆ.

ADVERTISEMENT

ಶುಭಾಂಗಿ 5.2 ಕೆ.ಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ರೀತಿ ಅತಿ ತೂಕ ಹೊಂದಿರುವ ಶಿಶುಗಳು ಜನಿಸುವುದು ತೀರಾ ಕಡಿಮೆ. ಇಂತಹ ಪ್ರಕರಣಗಳು ಅಸಾಧಾರಣ ಎಂದೂ ಮಿಶ್ರಾ ಹೇಳಿದ್ದಾರೆ.

'ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ನೋಡಿದ್ದು, ಇಂತಹ ಶಿಶುಗಳು ಜನಿಸಿದ 24 ಗಂಟೆಗಳವರೆಗೂ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುವುದು' ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಗಂಡು ನವಜಾತ ಶಿಶುವಿನ ಸರಾಸರಿ ತೂಕ 2.8 ರಿಂ 3.2 ಕೆ.ಜಿವರೆಗೆ ಇದ್ದರೆ, ಹೆಣ್ಣು ಶಿಶುಗಳ ತೂಕ 2.7ರಿಂದ3.1 ಕೆ.ಜಿವರೆಗೆ ಇರುತ್ತದೆ ಎಂದು ಮಿಶ್ರಾ ಹೇಳಿದ್ದಾರೆ

ಉತ್ತಮ ಜೀವನಶೈಲಿ, ಪೋಷಣೆ ಮತ್ತು ವೈದ್ಯಕೀಯ ಆರೈಕೆಯಿಂದಾಗಿ ಶಿಶುಗಳ ತೂಕ ಕ್ರಮೇಣ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.