
ತಿರುಪತಿ ತಿರುಮಲ ದೇಗುಲ
ಚಿತ್ರ: TTDevasthanams
ತಿರುಪತಿ: ತಿರುಪತಿ ತಿರುಮಲದಲ್ಲಿ ಅದ್ಧೂರಿ ರಥ ಸಪ್ತಮಿ ಆಚರಣೆಗೆ ತಯಾರಿ ನಡೆದಿದೆ. ಈ ದಿನ ಲಕ್ಷಾಂತರ ಭಕ್ತರು ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಕಾರಣ ಕೆಲವು ಸೇವೆ ಮತ್ತು ವಿಶೇಷ ದರ್ಶನಗಳನ್ನು ರದ್ದುಗೊಳಿಸಲಾಗಿದೆ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿಳಿಸಿದೆ.
ಅರ್ಜಿತ ಸೇವೆ, ವಿಶೇಷ ದರ್ಶನ ಮತ್ತು ಜನವರಿ 24 ರಿಂದ 26ರವರೆಗೆ ನೋಂದಾಯಿಸಿದ ಸರ್ವ ಸೇವಾ ದರ್ಶನವನ್ನೂ ರದ್ದುಗೊಳಿಸಲಾಗಿದೆ.
ಇದರ ಜತೆಗೆ ಎನ್‌ಆರ್‌ಐಗಳಿಗೂ ವಿಶೇಷ ದರ್ಶನ ಇರುವುದಿಲ್ಲ. ವಿಐಪಿಗಳ ದರ್ಶನ ಮತ್ತು ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.
ಅರ್ಜಿತ ಸೇವೆಗಳಾದ ಕಲ್ಯಾಣೋತ್ಸವ, ಉಂಜಲ ಸೇವೆ, ಅರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳೂ ರಥಸಪ್ತಮಿ ದಿನ ಇರುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಜನವರಿ 25ರಂದು ಭಾನುವಾರ ರಥಸಪ್ತಮಿ ಹಬ್ಬ ಇರುವ ಕಾರಣ ತಿರುಮಲದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಗಾಗಲೇ ಸರ್ವ ದರ್ಶನಕ್ಕೆ ಟೋಕನ್ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, ಜನವರಿ 26ರಿಂದ ಟೋಕನ್‌ಗಳನ್ನು ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.