
ಪಿಟಿಐ
ಮುಂಬೈ: ವಾಣಿಜ್ಯ ಬ್ಯಾಂಕುಗಳು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಒದಗಿಸುವ ಡಿಜಿಟಲ್ ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಶುಕ್ರವಾರ ಏಳು ಹೊಸ ನಿರ್ದೇಶನಗಳನ್ನು ಹೊರಡಿಸಿದೆ.
ಹೊಸ ನಿರ್ದೇಶನಗಳು ಮುಖ್ಯವಾಗಿ ನೀತಿಗಳು ಮತ್ತು ಕಾರ್ಯವಿಧಾನಗಳು, ವಿವಿಧ ಸೇವೆಗಳನ್ನು ಒದಗಿಸಲು ಬೇಕಾದ ಅರ್ಹತಾ ಮಾನದಂಡಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್‌ನ ತಾಂತ್ರಿಕ ಸಮಸ್ಯೆಗಳ ಕುರಿತ ಮಾರ್ಗಸೂಚಿಗಳಿಗೆ ಸಂಬಂಧಿಸಿದ್ದಾಗಿವೆ. ಈ ನಿರ್ದೇಶನಗಳು 2026ರ ಜನವರಿ 1ರಿಂದ ಅನ್ವಯವಾಗಲಿವೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಬ್ಯಾಂಕುಗಳ ವೆಬ್‌ಸೈಟ್ (ಇಂಟರ್ನೆಟ್ ಬ್ಯಾಂಕಿಂಗ್), ಮೊಬೈಲ್ ಫೋನ್ (ಮೊಬೈಲ್ ಬ್ಯಾಂಕಿಂಗ್) ಅಥವಾ ಗ್ರಾಹಕರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಹಣಕಾಸು ಮತ್ತು ಇತರ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವುದನ್ನು ಒಳಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.