ADVERTISEMENT

ಅಹಮದಾಬಾದ್ ಹೆಸರು ಬದಲಿಗೆ ಸಿದ್ಧ: ನಿತಿನ್

ಪಿಟಿಐ
Published 7 ನವೆಂಬರ್ 2018, 20:30 IST
Last Updated 7 ನವೆಂಬರ್ 2018, 20:30 IST
ನಿತಿನ್‌ ಪಟೇಲ್‌
ನಿತಿನ್‌ ಪಟೇಲ್‌   

ಅಹಮದಾಬಾದ್: ಅಹಮದಾಬಾದ್‌ ಅನ್ನು ಕರ್ಣಾವತಿ ಎಂದು ಹೆಸರು ಬದಲಿಸಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.

‘ಅಹಮದಾಬಾದ್‌ಹೆಸರು ಬದಲಾವಣೆಯನ್ನು ಜನ ಸಹ ಇಚ್ಛಿಸುತ್ತಿದ್ದರೆ. ಕಾನೂನಿನ ಅಡ್ಡಿಗಳನ್ನು ಮೀರಲು ನಮಗೆ ಬೆಂಬಲ ದೊರೆತರೆ,
ಹೆಸರು ಬದಲಿಸಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಗುಜರಾತ್ ರಾಜ್ಯ ಘಟಕದ ವಕ್ತಾರ ಮನೀಶ್ ಜೋಷಿ, ‘ಇದು ಆಡಳಿತಾರೂಢ
ಪಕ್ಷ ಚುನಾವಣೆಗೆ ಮಾಡುತ್ತಿರುವ ಮತ್ತೊಂದು ಗಿಮಿಕ್’ ಎಂದು ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.