ADVERTISEMENT

ಕೆಂಪುಕೋಟೆ ಸ್ಫೋಟ: ಬಿಲಾಲ್‌ ಎನ್‌ಐಎ ಕಸ್ಟಡಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:37 IST
Last Updated 19 ಡಿಸೆಂಬರ್ 2025, 14:37 IST
.
.   

ನವದೆಹಲಿ: ಕೆಂಪುಕೋಟೆ ಸಮೀಪ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿ ಡಾ.ಬಿಲಾಲ್‌ ನಸೀರ್‌ ಮಲ್ಲಾ ಎನ್‌ಐಎ ಕಸ್ಟಡಿ ಅವಧಿಯನ್ನು ಏಳು ದಿನ ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಆದೇಶಿಸಿದೆ.

ಪ್ರಕರಣದ ದಾಳಿಕೋರ ಉಮರ್‌–ಉನ್‌–ನಬಿಗೆ ಆಶ್ರಯ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸೋಯಬ್‌ನನ್ನು ಮತ್ತೆ ಐದು ದಿನ ಅಂದರೆ ಡಿಸೆಂಬರ್‌ 24ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. 

ಸೋಯಬ್‌ ಮತ್ತು ಬಿಲಾಲ್‌ನನ್ನು ಪಟಿಯಾಲಾ ಹೌಸ್‌ ನ್ಯಾಯಾಲಯದ ಎದುರು ಶುಕ್ರವಾರ ಎನ್ಐಎ ಹಾಜರುಪಡಿಸಿತ್ತು. ವಿಚಾರಣೆ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.

ADVERTISEMENT

ಬಿಲಾಲ್‌ನನ್ನು ಡಿಸೆಂಬರ್‌ 9ರಂದು ಬಂಧಿಸಿದ್ದು, ಪ್ರಕರಣದ ಪ್ರಮುಖ ಸಂಚುಕೋರ ಎಂದು ಎನ್‌ಐಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.