ADVERTISEMENT

ಅಧಿಕಾರಿಗಳ ಕಿರುಕುಳ, ಲೈಸೆನ್ಸ್ ರಾಜ್‌ ಸ್ಥಿತಿ ಈಗಿಲ್ಲ: ಸೈರಸ್‌ ಪೂನಾವಾಲಾ

ಪಿಟಿಐ
Published 13 ಆಗಸ್ಟ್ 2021, 15:15 IST
Last Updated 13 ಆಗಸ್ಟ್ 2021, 15:15 IST
ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾದಲ್ಲಿ ಸಿಬ್ಬಂದಿ ಕಾರ್ಯಾಚರಣೆ–ಸಾಂದರ್ಭಿಕ ಚಿತ್ರ
ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾದಲ್ಲಿ ಸಿಬ್ಬಂದಿ ಕಾರ್ಯಾಚರಣೆ–ಸಾಂದರ್ಭಿಕ ಚಿತ್ರ   

ಪುಣೆ: ಈ ಹಿಂದೆ ಲೈಸೆನ್ಸ್ ಪಡೆಯಲು ಔಷಧ ನಿಬಂಧಕರು, ಅಧಿಕಾರಿಗಳ ಕಾಲಿಗೂ ಬೀಳಬೇಕಿತ್ತು. ಈಗ ಮೋದಿ ಆಡಳಿತದಲ್ಲಿ ಅಧಿಕಾರಿಗಳ ಮನವೊಲಿಸುವಿಕೆ, ಲೈಸೆನ್ಸ್‌ ರಾಜ್‌ ಪರಿಸ್ಥಿತಿ ಕಡಿಮೆಯಾಗಿದೆ ಎಂದುಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾದ (ಎಸ್‌ಐಐ) ಅಧ್ಯಕ್ಷ ಡಾ.ಸೈರಸ್ ಪೂನಾವಾಲಾ ಅವರು ಹೇಳಿದ್ದಾರೆ.

‘ಬದಲಾದ ಸ್ಥಿತಿಯಿಂದಾಗಿ ಎಸ್‌ಐಐ ಸಂಸ್ಥೆಯು ತ್ವರಿತಗತಿಯಲ್ಲಿ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ಆರಂಭಿಸುವುದು ಸಾಧ್ಯವಾಯಿತು ಎಂದು ತಮ್ಮ ಮಾತಿಗೆ ನಿದರ್ಶನ ನೀಡಿದರು. ಲೋಕಮಾನ್ಯ ತಿಲಕ್‌ ಟ್ರಸ್ಟ್‌ ಸ್ಥಾಪಿಸಿರುವ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಸೀರಂ ಇನ್‌ಸ್ಟಿಟ್ಯೂಟ್‌ ಅನ್ನು 1966ರಲ್ಲಿ ದಿವಂಗತ ಪತ್ನಿ ವಿಲೂ ಜೊತೆಗೆ ಮದುವೆಯಾದ ಮಾರನೇ ದಿನ ಸ್ಥಾಪಿಸಲಾಗಿತ್ತು. ಅವರಿಗೇ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಡಾ.ಸೈರಸ್ ಪೂನಾವಾಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.