ADVERTISEMENT

ಅಯೋಧ್ಯೆ: ರಾಮ ಜನ್ಮಭೂಮಿ ಸ್ಥಳದಲ್ಲಿ ಪ್ರಾಚೀನ ದೇವಾಲಯದ ಅವಶೇಷ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2023, 11:04 IST
Last Updated 13 ಸೆಪ್ಟೆಂಬರ್ 2023, 11:04 IST
<div class="paragraphs"><p>ಉತ್ಖನನದ ವೇಳೆ ಪತ್ತೆಯಾದ ಅವಶೇಷಗಳು&nbsp;</p></div>

ಉತ್ಖನನದ ವೇಳೆ ಪತ್ತೆಯಾದ ಅವಶೇಷಗಳು 

   

ಟ್ವಿಟರ್‌ ಚಿತ್ರ–@ChampatRaiVHP

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ನಡೆಸಿದ ಉತ್ಖನನದ ಸಮಯದಲ್ಲಿ ಪ್ರಾಚೀನ ದೇವಾಲಯದ ಹಲವು ಅವಶೇಷಗಳು ದೊರೆತಿವೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಮಾಹಿತಿ ನೀಡಿದ್ದಾರೆ.

ADVERTISEMENT

ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರೈ ಅವರು ‘ಶ್ರೀರಾಮ ಜನ್ಮಭೂಮಿಯಲ್ಲಿ ಉತ್ಖನನದ ಸಮಯದಲ್ಲಿ ಪ್ರಾಚೀನ ದೇವಾಲಯದ ಅವಶೇಷಗಳು ದೊರೆತಿವೆ. ಇದರಲ್ಲಿ ಅನೇಕ ಪ್ರತಿಮೆಗಳು ಮತ್ತು ಕಂಬಗಳನ್ನು ಒಳಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ: PHOTOS | ನಿರ್ಮಾಣ ಹಂತದ ರಾಮಮಂದಿರದ ಫೋಟೊಗಳು ಬಿಡುಗಡೆ

ಕಳೆದ ವಾರ ಎಕ್ಸ್‌ ಖಾತೆಯಲ್ಲಿ ರಾಮ ಮಂದಿರ ಮೊದಲನೇ ಮಹಡಿಯ ನಿರ್ಮಾಣ ಕಾರ್ಯದ ಫೋಟೊಗಳನ್ನು ಹಂಚಿಕೊಳ್ಳಲಾಗಿತ್ತು.

ಸೆ.5ರಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಮೋದಿ ಅವರಿಗೆ ರಾಮಮಂದಿರ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಯೋಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.