(ಸಾಂದರ್ಭಿಕ ಚಿತ್ರ)
ಲಖನೌ: ಬಾಡಿಗೆ ಬಾಕಿ ಕೇಳಿದ್ದಕ್ಕೆ ಮನೆ ಮಾಲಕಿಯನ್ನು ಕೊಂದು, ದೇಹವನ್ನು ತುಂಡುಗಳನ್ನಾಗಿ ಮಾಡಿ ಸೂಟ್‌ಕೇಸ್‌ನಲ್ಲಿ ಹಾಕಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಮನೆ ಮಾಲಕಿ ದೀಪ್ಷಿಕಾ ಶರ್ಮಾ ಎಂಬವರು ಬುಧವಾರ ರಾತ್ರಿ ನಗರದ ರಾಜಿನಗರ ಎಕ್ಸ್‌ಟೆನ್ಷನ್‌ನಲ್ಲಿರುವ ಔರಾ ಚಿಮೆರಾ ಸೊಸೈಟಿಯಲ್ಲಿರುವ ಮನೆಗೆ ತೆರಳಿದ್ದಾಗ ಘಟನೆ ನಡೆದಿದೆ.
ಅಜಯ್ ಗುಪ್ತಾ ಹಾಗೂ ಆತನ ಪತ್ನಿ ಆಕೃತಿ ಗುಪ್ತಾ ಸೇರಿ ಈ ಕೃತ್ಯ ಎಸಗಿದ್ದರು. ₹ 90 ಸಾವಿರ ಬಾಡಿಗೆ ಬಾಕಿ ಇದ್ದನ್ನು ಕೇಳಿದಾಗ ಕೊಲೆ ಮಾಡಿದ್ದಾರೆ.
ಮಾಲಕಿಯ ತಲೆಗೆ ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು ತುಂಡುಗಳನ್ನಾಗಿ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿದ್ದಾರೆ.
ಸೂಟ್‌ಕೇಸ್ ಅನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲು ಮುಂದಾಗಿದ್ದಾರೆ. ಈ ವೇಳೆ ಫ್ಲ್ಯಾಟ್‌ಗೆ ದೀಪ್ಷಿಕಾ ಅವರ ಮನೆಕೆಲಸದಾಕೆ ಬಂದು ಮಾಲಕಿಯ ಬಗ್ಗೆ ವಿಚಾರಿಸಿದಾಗ ಅದಕ್ಕೆ ಉತ್ತರಿಸಲು ದಂಪತಿ ತಡವರಿಸಿದ್ದಾರೆ. ಈ ವೇಳೆ ಏನೋ ಅಕ್ರಮ ನಡೆದಿದೆ ಎನ್ನುವ ಶಂಕೆಯುಂಟಾಗಿದೆ.
ಕೂಡಲೇ ಮನೆಕೆಲಸದಾಕೆ ಹೊರಗಿನಿಂದ ಬಾಗಿಲು ಹಾಕಿ ದಂಪತಿಯನ್ನು ಮನೆಯೊಳಗೆ ಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಬಂದು ಹುಡುಕಿದಾಗಿ ಮಂಚದಡಿಯಲ್ಲಿ ಸೂಟ್‌ಕೇಸ್ ಲಭ್ಯವಾಗಿದೆ. ದಂಪತಿಯನ್ನು ಬಂಧಿಸಲಾಗಿದೆ.
ಮನೆ ಬಾಡಿಗೆ ಕೊಡುವ ನೆಪದಲ್ಲಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಇದು ಪೂರ್ವಯೋಜಿತ ಕೃತ್ಯ ಎಂದು ದೀಪ್ಷಿಕಾ ತಾಯಿ ಹೇಳಿದ್ದಾರೆ. ಈ ಹಿಂದೆಯೂ ಬಾಡಿಗೆ ವಸೂಲಿ ಸಂಬಂಧ ಜಗಳ ಉಂಟಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.