ADVERTISEMENT

ಕಚ್ಚುವವರು ಸಂಸತ್ತಿನಲ್ಲೇ ಇದ್ದಾರೆ: ನಾಯಿ ತೆಗೆದುಕೊಂಡು ಹೋದ ರೇಣುಕಾ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 9:40 IST
Last Updated 1 ಡಿಸೆಂಬರ್ 2025, 9:40 IST
   

ನವದೆಹಲಿ: ಸಂಸತ್ತಿನ ಆವರಣದೊಳಗೆ ಶ್ವಾನವನ್ನು ತೆಗೆದುಕೊಂಡು ಹೋಗುವ ಮೂಲಕ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ವಿದಾದಕ್ಕೆ ಗ್ರಾಸವಾಗಿದ್ದಾರೆ.

ಬಳಿಕ ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ರೇಣುಕಾ, 'ನಿಜವಾಗಿ ಕಚ್ಚುವವರು ಸಂಸತ್ತಿನ ಒಳಗಡೆಯೇ ಕುಳಿತಿದ್ದಾರೆ' ಎಂದು ತಿರುಗೇಟು ನೀಡಿದ್ದಾರೆ.

'ಅಲ್ಲಿ ಏನಾದರೂ ಕಾನೂನು ಇದೆಯೇ? ನಾನು ಕಾರಿನಲ್ಲಿ ಹೋಗುತ್ತಿದ್ದೆ. ಈ ಸಂದರ್ಭದಲ್ಲಿ ಕಾರಿಗೆ ಸ್ಕೂಟರ್ ಡಿಕ್ಕಿಯಾಗಿತ್ತು. ಈ ನಾಯಿಮರಿ ಅಲ್ಲಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದಕ್ಕೆ ಡಿಕ್ಕಿಯಾಗಿರಬಹುದೆಂದು ಭಾವಿಸಿದ್ದೆ. ಬಳಿಕ ಅದನ್ನು ಎತ್ತಿಕೊಂಡು, ಕಾರಿನಲ್ಲಿ ಕೂರಿಸಿ ಸಂಸತ್ತಿಗೆ ಬಂದು ವಾಪಸ್ ಕಳುಹಿಸಿದೆ' ಎಂದಿದ್ದಾರೆ.

ADVERTISEMENT

'ಕಾರು ಹೊರಟು ಹೋಯಿತು. ನಾಯಿಯೂ ಹೋಯಿತು. ಅಷ್ಟು ಮಾತ್ರಕ್ಕೆ ಚರ್ಚೆಯ ಅಗತ್ಯವೇನಿತ್ತು? ನಿಜವಾಗಿ ಕಚ್ಚುವವರು ಸಂಸತ್ತಿನಲ್ಲೇ ಕುಳಿತಿದ್ದಾರೆ. ಅವರೇ ಸರ್ಕಾರವನ್ನು ನಡೆಸುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಮೂಕಪ್ರಾಣಿಯ ಬಗ್ಗೆ ನಾನು ಕಾಳಜಿ ವಹಿಸಿದ್ದೇನೆ. ಅಷ್ಟು ಮಾತ್ರಕ್ಕೆ ಚರ್ಚೆಯ ವಿಷಯವಾಗಿದೆ. ಸರ್ಕಾರದವರಿಗೆ ಚರ್ಚಿಸಲು ಬೇರೆ ವಿಷಯವಿಲ್ಲವೇ? ನಾಯಿಯನ್ನು ಮನೆಗೆ ತೆಗೆದುಕೊಂಡು ಹೋಗಲು ಹೇಳಿರುವೆ. ಸಂಸತ್ತಿನಲ್ಲಿ ಕುಳಿತು ಪ್ರತಿದಿನ ನಮ್ಮನ್ನು ಕಚ್ಚುವವರ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.