
ವಾಯು ಸೇನಾ ಸಿಬ್ಬಂದಿ ಪಥಸಂಚಲನ
ಕೃಪೆ: ಪಿಟಿಐ
ನವದೆಹಲಿ: ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಎಲ್ಲೆಡೆ ಬಿಗಿ ಭದ್ರತೆ ವಹಿಸಲಾಗಿದೆ. ರಾಷ್ಟ್ರರಾಜಧಾನಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಸ್ಥಭ್ತಚಿತ್ರಗಳ ಮೆರವಣಿಗೆಯು ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಿದೆ.
ಇದೇ ವೇಳೆ, ಸೇನೆಯ Mi-17 1V ಹೆಲಿಕಾಪ್ಟರ್‌ಗಳು ಕರ್ತವ್ಯ ಪಥದ ಮೇಲೆ ಹೂಮಳೆ ಸುರಿಸಿದವು. ಗ್ರೂಪ್ ಕ್ಯಾಪ್ಟನ್ ಅಲೋಕ್ ಅಹ್ಲಾವತ್ ಅವರು ಹೆಲಿಕಾಪ್ಟರ್ ಕಾರ್ಯಾಚರನೆಯ ನೇತೃತ್ವ ವಹಿಸಿದ್ದರು.
ಪಥಸಂಚನದ ವೇಳೆ ಸೇನಾ ಶಕ್ತಿಯ ಅನಾವರಣಗೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ. ಇದೇ ವೇಳೆ, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯೂ ಪ್ರದರ್ಶನಗೊಂಡಿದೆ.
ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳು ಗಮನ ಸೆಳೆದವು. ಮೂರೂ ಸೇನೆಗಳ ಒಗ್ಗಟ್ಟನ್ನು ಸಾರುವ ಸ್ಥಬ್ಧಚಿತ್ರವು ಮೆರವಣಿಗೆಯಲ್ಲಿ ಸಾಗಿತು.
ಮೆರವಣಿಗೆಯಲ್ಲಿ ಯುರೋಪಿಯನ್ ಒಕ್ಕೂಟದ ತಂಡವೂ ಪಾಲ್ಗೊಂಡಿದ್ದು ವಿಶೇಷ. ಯಶಸ್ಸಿನತ್ತ ಸಾಗುತ್ತಿರುವ ಭಾರತವು ಜಗತ್ತನ್ನು ಸ್ಥಿರತೆ, ಸಮೃದ್ಧಿ ಮತ್ತು ಸುರಕ್ಷಿತೆಯತ್ತ ಕೊಂಡೊಯ್ಯುತ್ತಿದೆ ಎಂದು ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.