ADVERTISEMENT

‘ನೇಷನ್‌ ವಾಂಟ್ಸ್‌ ಟು ನೊ’ ಪದ ಪ್ರಯೋಗಿಸಲು ಅರ್ನಬ್‌‌ ಸ್ವತಂತ್ರ: ಹೈಕೋರ್ಟ್‌

ಪಿಟಿಐ
Published 23 ಅಕ್ಟೋಬರ್ 2020, 17:29 IST
Last Updated 23 ಅಕ್ಟೋಬರ್ 2020, 17:29 IST
ಅರ್ನಬ್‌ ಗೋಸ್ವಾಮಿ
ಅರ್ನಬ್‌ ಗೋಸ್ವಾಮಿ   

ನವದೆಹಲಿ: ‘ರಿಪಬ್ಲಿಕ್‌ ಸುದ್ದಿ ವಾಹಿನಿಯ ಸಂಪಾದಕ ಅರ್ನಬ್‌ ಗೋಸ್ವಾಮಿ, ಚರ್ಚೆ ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ಸಂದರ್ಭಗಳಲ್ಲಿ ‘ನೇಷನ್‌ ವಾಂಟ್ಸ್‌ ಟು ನೊ’ ಪದ ಪ್ರಯೋಗಿಸಲು ಸ್ವತಂತ್ರರಾಗಿದ್ದಾರೆ’ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ‌ ಹೇಳಿದೆ.

ಅರ್ನಬ್‌ ಅವರು ‘ನೇಷನ್‌ ವಾಂಟ್ಸ್‌ ಟು ನೊ’ ಟ್ಯಾಗ್‌ಲೈನ್‌ ಬಳಸದಂತೆ ಹಾಗೂ ರಿಪಬ್ಲಿಕ್‌ ವಾಹಿನಿಯ ಮಾಲೀಕತ್ವ ಹೊಂದಿರುವ ಎಆರ್‌ಜಿ ಔಟ್‌ಲಿಯರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಚರ್ಚಾ ಕಾರ್ಯಕ್ರಮಕ್ಕೆ ‘ನ್ಯೂಸ್‌ ಹವರ್‌’ ಎಂದು ಹೆಸರಿಟ್ಟಿರುವುದನ್ನು ತಡೆಯಬೇಕೆಂದುಬೆನೆಟ್‌ ಕೋಲ್ಮನ್‌ ಆ್ಯಂಡ್‌ ಕಂಪನಿ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ‌ನ್ಯಾಯಾಧೀಶ ಜಯಂತ್‌ ನಾಥ್‌ ‘ನೇಷನ್‌ ವಾಂಟ್ಸ್‌ ಟು ನೊ’‍ಪದ ಪ್ರಯೋಗಿಸದಂತೆ ಅರ್ನಬ್‌ಗೆ ಸೂಚಿಸಲು ಆಗುವುದಿಲ್ಲ’ ಎಂದರು.

ADVERTISEMENT

‘ಈ ಟ್ಯಾಗ್‌ಲೈನ್‌ ಅನ್ನು ಅರ್ನಬ್‌ ಅಥವಾ ಎಆರ್‌ಜಿ ಔಟ್‌ಲಿಯರ್‌ ಸಂಸ್ಥೆಯು ವ್ಯಾಪಾರದ ಮುದ್ರೆಯಾಗಿ (ಟ್ರೇಡ್‌ ಮಾರ್ಕ್‌) ಬಳಸಿದರೆ ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು’ ಎಂದು ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.