ADVERTISEMENT

ಗೋಮೂತ್ರದಲ್ಲಿ ಔಷಧೀಯ ಗುಣಕ್ಕೆ ಸಂಶೋಧನಾ ಲೇಖನ ಆಧಾರ: ಕಾಮಕೋಟಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 16:28 IST
Last Updated 20 ಜನವರಿ 2025, 16:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಗೋಮೂತ್ರದಲ್ಲಿ ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ಉರಿಯೂತ ಪ್ರತಿರೋಧಕ ಗುಣಗಳು ಇವೆ ಎಂದು ತಾವು ಹೇಳಿದ್ದ ಮಾತುಗಳಿಗೆ ಐಐಟಿ–ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರು ಸೋಮವಾರ ‘ವೈಜ್ಞಾನಿಕ ಆಧಾರ’ ಒದಗಿಸಿದ್ದಾರೆ.

ಜ್ವರಪೀಡಿತರಾಗಿದ್ದ ಸನ್ಯಾಸಿಯೊಬ್ಬರು ಗೋಮೂತ್ರ ಬಳಸಿ 15 ನಿಮಿಷಗಳಲ್ಲಿ ಜ್ವರ ವಾಸಿ ಮಾಡಿಕೊಂಡಿದ್ದರು ಎಂದು ಕಾಮಕೋಟಿ ಅವರು ಜನವರಿ 15ರಂದು ಮಾಡಿದ್ದ ಭಾಷಣದಲ್ಲಿ ಹೇಳಿದ್ದರು. ಈ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೆಯಾಗಿತ್ತು.

ಕಾಮಕೋಟಿ ಅವರು ಅವೈಜ್ಞಾನಿಕವಾಗಿ ಮಾತನಾಡಿದ್ದಾರೆ ಎಂದು ಟೀಕಿಸಲಾಗಿತ್ತು.

ADVERTISEMENT

‘ನನ್ನ ಮಾತುಗಳಿಗೆ ವೈಜ್ಞಾನಿಕ ಆಧಾರ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ನಾನು ಐದು ಸಂಶೋಧನಾ ಲೇಖನಗಳನ್ನು ಕಳುಹಿಸುತ್ತಿದ್ದೇನೆ. ಅವುಗಳಲ್ಲಿ ಒಂದು ನೇಚರ್‌ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಈ ವಿಚಾರವಾಗಿ ಒಂದು ಪೇಟೆಂಟ್ ಕೂಡ ಇದೆ. ಗೋಮೂತ್ರದಲ್ಲಿ ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ಉರಿಯೂತ ಪ್ರತಿರೋಧಕ ಗುಣಗಳು ಇವೆ ಎಂಬುದನ್ನು ಲೇಖನಗಳು ಹೇಳುತ್ತವೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ’ ಎಂದು ಕಾಮಕೋಟಿ ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.