ADVERTISEMENT

ಮತಾಂತರಗೊಂಡ ದಲಿತರಿಗೆ ಮೀಸಲಾತಿ ಸೌಲಭ್ಯ ಬೇಡ: ಅಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:45 IST
Last Updated 6 ಮಾರ್ಚ್ 2023, 19:45 IST

ನವದೆಹಲಿ: ‘ಇಸ್ಲಾಂ, ಕ್ರಿಶ್ಚಿಯನ್ ಅಥವಾ ಇತರ ಯಾವುದೇ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಸೌಲಭ್ಯ ವಿಸ್ತರಿಸಬಾರದು’ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

ಆರ್‌ಎಸ್ಎಸ್‌ ಮಾಧ್ಯಮ ವಿಭಾಗ ಮತ್ತು ಇತರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿಯ ಮತಾಂತರಗೊಂಡ ಸದಸ್ಯರಿಗೆ ಮೀಸಲಾತಿ ವಿಸ್ತರಿಸುವ ವಿಷಯವನ್ನು ಪರಿಶೀಲಿಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ನೇಮಿಸಿದ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಆಯೋಗದ ಮುಂದೆ ಜ್ಞಾಪಕ ಪತ್ರ ಸಲ್ಲಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧ್ಯಮ ವಿಭಾಗ ವಿಶ್ವ ಸಂವಾದ ಕೇಂದ್ರ (ವಿಎಸ್‌ಕೆ) ನಿರ್ಧರಿಸಿದೆ ಎಂದು ತಿಳಿಸಿದರು.

ADVERTISEMENT

’ನ್ಯಾಯಯುತ ತೀರ್ಮಾನಕ್ಕಾಗಿ ಆಯೋಗದ ಮುಂದೆ ವಾಸ್ತವಾಂಶ ಇಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಕುಮಾರ್‌ ಹೇಳಿದರು.

ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯ ಮತ್ತು ಹಿಂದೂ ವಿಶ್ವ ಎಂಬ ಪಾಕ್ಷಿಕ ನಿಯತಕಾಲಿಕ ಸಹಯೋಗದೊಂದಿಗೆ ವಿಎಸ್‌ಕೆ ಈ ಸಮಾವೇಶ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.