ADVERTISEMENT

ಆನ್‌ಲೈನ್‌ ಗೇಮ್‌ ನಿರ್ಬಂಧ ಸದ್ಯದಲ್ಲೇ ತೀರ್ಮಾನ: ಸಚಿವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 22:45 IST
Last Updated 18 ಡಿಸೆಂಬರ್ 2022, 22:45 IST
ಅಶ್ವಿನಿ ವೈಷ್ಣವ್‌
ಅಶ್ವಿನಿ ವೈಷ್ಣವ್‌   

ಬೆಂಗಳೂರು: ‘ಆನ್‌ಲೈನ್‌ ಗೇಮ್‌ ನಿರ್ಬಂಧಕ್ಕೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿವೆ. ಕಾನೂನು ರೂಪಿಸುವ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ಭಾನುವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು, ಬಹುತೇಕ ರಾಜ್ಯಗಳು ಆನ್‌ಲೈನ್ ಗೇಮ್ ನಿರ್ಬಂಧಿಸಲು ಉತ್ಸಾಹ ತೋರಿವೆ. ಎಲ್ಲ ರಾಜ್ಯಗಳ ಮಾಹಿತಿ ಕ್ರೋಢೀಕರಿಸಿ ನಿರ್ಧರಿಸುತ್ತೇವೆ. ‘ಡಿಜಿಟಲ್‌ ಇಂಡಿಯಾ ಕಾಯ್ದೆ’ಯನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದರು.

ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ‘5ಜಿ’ ಇಂಟರ್‌ನೆಟ್‌ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷದ ದೀಪಾವಳಿಗೆ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ ಎಂದುಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘2023ರ ಅಂತ್ಯಕ್ಕೆ ದೇಶದ ಮೊದಲ ಹೈಡ್ರೋಜನ್‌ ರೈಲು ಸಂಚರಿಸಲಿದೆ. ಮುಂಬೈ- ಅಹಮದಾಬಾದ್‌ ನಡುವೆ ಮೊದಲ ಬುಲೆಟ್ ರೈಲು ಸಂಚಾರ ಮಾಡಲಿದೆ’ ಎಂದು ರೈಲ್ವೆ ಸಚಿವರೂ ಆದ ಅವರು ಹೇಳಿದರು.

116 ಕಿ.ಮೀ ವರೆಗೆ ಬುಲೆಟ್ ರೈಲು ಸಂಚಾರಕ್ಕೆ ಹಳಿ ನಿರ್ಮಿಸಲಾಗಿದೆ. ಅದರ ವೇಗವು ಪ್ರತಿ ಗಂಟೆಗೆ 320 ಕಿ.ಮೀ. ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.