ADVERTISEMENT

ಭಾರತದಲ್ಲಿ ರಾಯಿಟರ್ಸ್‌ ಸುದ್ದಿಸಂಸ್ಥೆಯ ‘ಎಕ್ಸ್‌’ ಖಾತೆ ಕೆಲಕಾಲ ಸ್ಥಗಿತ

ಪಿಟಿಐ
Published 6 ಜುಲೈ 2025, 16:11 IST
Last Updated 6 ಜುಲೈ 2025, 16:11 IST
   

ನವದೆಹಲಿ: ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್‌ನ ‘ಎಕ್ಸ್‌’ ಖಾತೆಯನ್ನು ಭಾರತದಲ್ಲಿ ಕೆಲ ಗಂಟೆ ಸ್ಥಗಿತಗೊಳಿಸಲಾಗಿತ್ತು. ಸರ್ಕಾರ ಮಧ್ಯಪ್ರವೇಶಿಸಿದ ಬಳಿಕ ಭಾನುವಾರ ಖಾತೆಯನ್ನು ಪುನರಾರಂಭಿಸಲಾಗಿದೆ.

ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಸುಮಾರು 24 ಗಂಟೆ ರಾಯಿಟರ್ಸ್ ಖಾತೆಯನ್ನು ಸ್ಥಗಿತಗೊಳಿಸಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.

ಸರ್ಕಾರವು ಈ ಬಗ್ಗೆ ಇಲಾನ್‌ ಮಸ್ಕ್‌ ಒಡೆತನದ ಸಾಮಾಜಿಕ ಜಾಲತಾಣ ವೇದಿಕೆಯ ವಿವರಣೆ ಕೇಳಿತಲ್ಲದೆ, ರಾಯಿಟರ್ಸ್‌ ಖಾತೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿಲ್ಲ ಎಂದು ಹೇಳಿತು. ಇದಾದ ಸ್ವಲ್ಪ ಸಮಯದ ನಂತರ ಖಾತೆಯನ್ನು ಪುನಃ ಸ್ಥಾಪಿಸಲಾಯಿತು.

ADVERTISEMENT

‘ಕಾನೂನುಬದ್ಧ ಕೋರಿಕೆಯಂತೆ ಭಾರತದಲ್ಲಿ ಖಾತೆಯನ್ನು ತಡೆಹಿಡಿಯಲಾಗಿದೆ’ ಎಂಬ ಸೂಚನೆಯನ್ನು ಭಾನುವಾರ ಸಂಜೆಯವರೆಗೆ ರಾಯಿಟರ್ಸ್‌ ‘ಎಕ್ಸ್‌’ ಪ್ರದರ್ಶಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.