ADVERTISEMENT

ಆರ್.ಜಿ ಕರ್ ಪ್ರಕರಣ: 7 ತಿಂಗಳ ಬಳಿಕ ಪೋಷಕರಿಗೆ ಮರಣ ಪ್ರಮಾಣ ಪತ್ರ ಹಸ್ತಾಂತರ

ಪಿಟಿಐ
Published 20 ಮಾರ್ಚ್ 2025, 5:00 IST
Last Updated 20 ಮಾರ್ಚ್ 2025, 5:00 IST
<div class="paragraphs"><p>ಘಟನೆ ವಿರೋಧಿಸಿ ನಡೆದ ಪ್ರತಿಭಟನೆ</p></div>

ಘಟನೆ ವಿರೋಧಿಸಿ ನಡೆದ ಪ್ರತಿಭಟನೆ

   

ಕೋಲ್ಕತ್ತ: ಇಲ್ಲಿನ ಆರ್‌.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ ಹಾಗೂ ಕೊಲೆ ‍ಪ್ರಕರಣದ ಸಂತ್ರಸ್ತೆ ವೈದ್ಯ ವಿದ್ಯಾರ್ಥಿಯ ಮರಣ ಪ್ರಮಾಣಪತ್ರ ಘಟನೆ ನಡೆದ ಏಳು ತಿಂಗಳ ಬಳಿಕ ಪೋಷಕರಿಗೆ ನೀಡಲಾಗಿದೆ.

ಪಶ್ಚಿಮ ಬಂಗಾಳ ಆರೋಗ್ಯ ಕಾರ್ಯದರ್ಶಿ ಎನ್‌.ಎಸ್ ನಿಗಮ್ ಅವರಿಂದ ಪೋಷಕರು ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.

ADVERTISEMENT

ಆರ್‌.ಜಿ ಕರ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ , ಉಪ ಪ್ರಾಂಶುಪಾಲರ ಜೊತೆ ಸಂತ್ರಸ್ತೆಯ ಮನೆಗೆ ಬುಧವಾರ ರಾತ್ರಿ ತೆರಳಿದ ಅವರು, ಮೂಲ ದಾಖಲೆಯನ್ನು ಪೋಷಕರಿಗೆ ಹಸ್ತಾಂತರಿಸಿದರು.

‘ಮರಣ ‍ಪ್ರಮಾಣಪತ್ರದ ಮೂಲ ಪ್ರತಿ ಅವರು ಬಯಸಿದ್ದರು. ಇಂದು ಅವರ ಮನೆಗೆ ಭೇಟಿ ನೀಡಿ ನಾವು ಹಸ್ತಾಂತರಿಸಿದ್ದೇವೆ’ ಎಂದು ನಿಗಮ್ ತಿಳಿಸಿದ್ದಾರೆ.

‘ಘಟನೆ ನಡೆದ ಆಗಸ್ಟ್ 9ರಿಂದ ನಾವು ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿದ್ದೆವು. ಇಂದು ಆರೋಗ್ಯ ಕಾರ್ಯದರ್ಶಿ ಅಚನಕ್ಕಾಗಿ ನಮ್ಮ ಮನೆಗೆ ಬಂದು ದಾಖಲೆ ಕೊಟ್ಟಿದ್ದಾರೆ’ ಸಂತ್ರಸ್ತೆಯ ತಂದೆ ಹೇಳಿದ್ದಾರೆ.

‘ಮೂಲ ದಾಖಲೆ ಪಡೆಯಲು ನಾವು ಕಷ್ಟಪಟ್ಟೆವು. ಜನವರಿಯಲ್ಲಿ ನಾವೊಂದು ಇ–ಮೇಲ್ ಕಳಿಸಿದ್ದೆವು. ಅದಾಗ್ಯೂ ಇಲಾಖೆಯಿಂದ ಇಲಾಖೆಗೆ ಅಲೆದಾಡಿಸಿದ್ದರು. ಆದರೆ ಯಾರೂ ಸಹಕಾರ ನೀಡಿರಲಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಬಳಿಕ ಲಿಂಕ್ ಕಳುಹಿಸಿದ್ದರು. ಆ ಮೂಲಕ ದಾಖಲೆಯನ್ನು ಡೌನ್‌ಲೋಡ್ ಮಾಡಿಕೊಂಡಿದ್ದೆವು ಎಂದ ಅವರು ಹೇಳಿದ್ದಾರೆ.

31 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಆರ್‌.ಜಿ ಕರ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಕಟ್ಟಡದ ಸೆಮಿನಾರ್ ಹಾಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.