ಸಾಂದರ್ಭಿಕ ಚಿತ್ರ
ತಿರುವನಂತಪುರ: ಇಲ್ಲಿನ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೇ 2ವರೆಗೂ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಆರೆಂಜ್ ಅಲರ್ಟ್ ಬಿಡುಗಡೆ ಮಾಡಿದೆ.
ಹಾಗೆಯೇ ತ್ರಿಶ್ಶೂರ್, ಆಲಪ್ಪುಳ, ಕೋಯಿಕ್ಕೋಡ್‌ನಲ್ಲಿಯೂ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಯೆಲ್ಲೋ ಅಲರ್ಟ್ ಬಿಡುಗಡೆ ಮಾಡಿದೆ.
ಇಂದಿನಿಂದ ಮೇ 4ರವರೆಗೆ ಪಾಲಕ್ಕಾಡ್ ಜಿಲ್ಲೆಯಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ತ್ರಿಶ್ಶೂರ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್, ಕೊಲ್ಲಂ, ಕೋಯಿಕ್ಕೋಡ್‌ನಲ್ಲಿ ಅಂದಾಜು 39 ಡಿಗ್ರಿ ಸೆಲ್ಸಿಯಸ್ ಮತ್ತು ಅಲಪ್ಪುಳ, ಪಟ್ಟಣಂತಿಟ್ಟು, ಕಣ್ಣೂರು ಜಿಲ್ಲೆಗಳಲ್ಲಿ ಅಂದಾಜು 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ ಎಂದು ಹೇಳಿದೆ.
ಈ ಜಿಲ್ಲೆಗಳಲ್ಲಿ ಸೆಖೆ ಮತ್ತು ಆರ್ಧ್ರ ವಾತಾವರಣ ಮೇ 4ವರೆಗೂ ಇರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.