ರಿವರ್ ರ್‍ಯಾಫ್ಟಿಂಗ್
ಋಷಿಕೇಷ: ಭಾರಿ ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಳವಾಗಿದ್ದು, ಋಷಿಕೇಶದಲ್ಲಿ ರಿವರ್ ರ್‍ಯಾಫ್ಟಿಂಗ್ (ಜಲಕ್ರೀಡೆ) ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮುನಿ ಕಿ ರೇತಿ ನಗರದ ಬಳಿ ಗಂಗಾ ನದಿಯ ನೀರಿನಲ್ಲಿ ನೀರಿನಲ್ಲಿ ರಿವರ್ ರಾಫ್ಟಿಂಗ್‌ನಂತ ಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜೂನ್ 24ರಿಂದ ಆಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ತೆಹ್ರಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜಸ್ಪಾಲ್ ಚೌಹಾಣ್ ಪಿಟಿಐಗೆ ತಿಳಿಸಿದ್ದಾರೆ.
ಗಂಗಾ ನದಿ ನೀರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಪಾತ್ರದಲ್ಲಿ ಹೂಳು ಸಂಗ್ರಹವಾಗಿದೆ. ಮಂಗಳವಾರ ಗಂಗಾ ನದಿಯ ನೀರು 338 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು, ಅಪಾಯದ ಮಟ್ಟ 339 ಮೀಟರ್ ಆಗಿದ್ದು, ನೀರು ಅಪಾಯದ ಮಟ್ಟ ತಲುಪಲು ಇನ್ನೊಂದು ಮೀಟರ್ ಮಾತ್ರ ಬಾಕಿ ಇತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಡೆಹರಾಡೂನ್ ಜಿಲ್ಲೆಯಲ್ಲಿರುವ ಋಷಿಕೇಶದಲ್ಲಿನ ರಿವರ್ ರ್‍ಯಾಫ್ಟಿಂಗ್ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಜುಲೈ ಮತ್ತು ಆಗಸ್ಟ್ ಹೊರತುಪಡಿಸಿ 10 ತಿಂಗಳ ಕಾಲವೂ ರಿವರ್ ರ್‍ಯಾಫ್ಟಿಂಗ್ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.