ADVERTISEMENT

ಸ್ಕೂಟರ್‌ಗೆ ಅಡ್ಡ ಬಂದ ಕಿವುಡನನ್ನು ಬರ್ಬರವಾಗಿ ಹತ್ಯೆ ಮಾಡಿದ ಶಾಲಾ ಬಾಲಕಿ!

ಪಿಟಿಐ
Published 24 ಜುಲೈ 2022, 16:07 IST
Last Updated 24 ಜುಲೈ 2022, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಪುರ್: ತನ್ನ ಸ್ಕೂಟರ್‌ಗೆ ಅಡ್ಡ ಬಂದ ಎಂದುಕಿವುಡ ಹಾಗೂ ಮೂಕನಾಗಿದ್ದ ವ್ಯಕ್ತಿಯೊಬ್ಬನನ್ನು ಬಾಲಕಿಯೊಬ್ಬಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸಗಡದಲ್ಲಿ ಭಾನುವಾರ ನಡೆದಿದೆ.

ಛತ್ತೀಸಗಡದ ರಾಜಧಾನಿ ರಾಯಪುರ್‌ದ ಕಂಕಾಲಿಪಾರಾ ಪ್ರದೇಶದ ಆಜಾದ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಈ ಘಟನೆ ನಡೆದಿದೆ.

ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದ ಮಂದಿರ್ ಅಸಾದ್ ಪ್ರದೇಶದ 16 ವರ್ಷದ ಬಾಲಕಿ ರಸ್ತೆಯಲ್ಲಿ ಅಡ್ಡ ಬಂದ ವ್ಯಕ್ತಿಗೆ ಹಾರ್ನ್ ಮಾಡಿದ್ದಳು. ಆದರೆ, ಆ ವ್ಯಕ್ತಿ ದೂರ ಸರಿಯದಿದ್ದರಿಂದ ಬ್ಯಾಗ್‌ನಲ್ಲಿದ್ದ ಚಾಕುವನ್ನು ತೆಗೆದು ಆತನ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾಳೆ. ಹತ್ಯೆಯಾದ 36 ವರ್ಷದ ವ್ಯಕ್ತಿ ಕಿವುಡ ಹಾಗೂ ಮೂಕನಾಗಿದ್ದ ಎಂದು ಎಸ್‌ಪಿ ಡಿ.ಸಿ ಪಟೇಲ್ ತಿಳಿಸಿದ್ದಾರೆ.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ಬಂಧಿಸಲಾಗಿದ್ದು ಸೋಮವಾರ ಬಾಲನ್ಯಾಯ ಮಂಡಳಿ ಮುಂದೆ ಅವಳನ್ನು ಹಾಜರು ಪಡಿಸಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.