ADVERTISEMENT

ನಿರ್ಮಾಪಕ ರೋಹಿತ್ ಶೆಟ್ಟಿ ನಿವಾಸದಲ್ಲಿ ಗುಂಡಿನ ದಾಳಿ: ಮತ್ತೊಬ್ಬ ಆರೋಪಿ ಸೆರೆ

ಪಿಟಿಐ
Published 5 ಫೆಬ್ರುವರಿ 2026, 12:48 IST
Last Updated 5 ಫೆಬ್ರುವರಿ 2026, 12:48 IST
ರೋಹಿತ್ ಶೆಟ್ಟಿ (ಎಎಫ್‌ಪಿ ಚಿತ್ರ)
ರೋಹಿತ್ ಶೆಟ್ಟಿ (ಎಎಫ್‌ಪಿ ಚಿತ್ರ)   

ಮುಂಬೈ: ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದಲ್ಲಿ ನಡೆದ ಗುಂಡಿನ ದಾಳಿ ಸಂಬಂಧಿಸಿ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪುಣೆ ನಿವಾಸಿ ಆಸಾರಾಂ ಫಸಲೆ ಬಂಧಿತ ಆರೋಪಿ. ಇದರೊಂದಿಗೆ ಪ್ರಕರಣದಲ್ಲಿ ಐವರು ಬಂಧನಕ್ಕೊಳಗಾಗಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಆತನಿಗೆ ಆಯುಧವನ್ನು ಫಸಲೆ ಒದಗಿಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.

ಗುಂಡಿನ ದಾಳಿಯ ವೇಳೆ ಎಲ್ಲಾ ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸದಸ್ಯ ಶುಭಂ ಲೋಂಕರ್‌ನೊಂದಿಗೆ ಸಂಪರ್ಕದಲ್ಲಿದ್ದರು. ಈ ಪ್ರಕರಣ ಸೇರಿದಂತೆ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಮತ್ತು ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲೂ ಲೋಂಕರ್ ಬೇಕಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಭಾನುವಾರ ರಾತ್ರಿ 12.45ರ ವೇಳೆ ಮುಂಬೈನ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಕನಿಷ್ಠ ಐದು ಸುತ್ತು ಗುಂಡು ಹಾರಿಸಲಾಗಿತ್ತು. ಒಂದು ಗುಂಡು ಕಟ್ಟಡದಲ್ಲಿರುವ ಜಿಮ್‌ನ ಗಾಜಿಗೆ ತಗುಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.