ADVERTISEMENT

ಕರ್ನಾಟಕದ ಸಚಿವರಿಗೆ ಪ್ರಚಾರ ಪಡೆಯುವ ಹುಚ್ಚು: ದೇವೇಂದ್ರ ಫಡಣವೀಸ್

ಪಿಟಿಐ
Published 13 ಅಕ್ಟೋಬರ್ 2025, 16:14 IST
Last Updated 13 ಅಕ್ಟೋಬರ್ 2025, 16:14 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಅಮರಾವತಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಕರ್ನಾಟಕದ ಸಚಿವರು ಆಗ್ರಹಿಸಿರುವುದು ‘ಪ್ರಚಾರ ಪಡೆಯುವ ದುರುದ್ದೇಶವಲ್ಲದೆ ಬೇರೇನೂ ಅಲ್ಲ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಟೀಕಿಸಿದ್ದಾರೆ.

ಅಮರಾವತಿಯಲ್ಲಿ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಪ್ರಿಯಾಂಕ್ ಖರ್ಗೆ ಅವರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ತಮ್ಮದೇ ಆದಂತಹ ಯಾವುದೇ ನಿಲುವು ಇಲ್ಲ. ಮಾತ್ರವಲ್ಲ, ರಾಜಕೀಯದಲ್ಲಿ ಅವರ ಸ್ಥಾನಮಾನವು ಅವರ ತಂದೆಯ (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ) ಮೇಲೆ ಅವಲಂಬಿತವಾಗಿದೆ’ ಎಂದಿದ್ದಾರೆ.

‘ಈ ಹಿಂದೆ ಆರ್‌ಎಸ್‌ಎಸ್‌ ಅನ್ನು ನಿಷೇಧಿಸುವ ಪ್ರಯತ್ನಗಳು ನಡೆದಿದ್ದವು ಮತ್ತು ಮೂರು ಸಲ ಅದನ್ನು ನಿಷೇಧಿಸಲಾಗಿತ್ತು. ಸಂಘವನ್ನು ನಿಷೇಧಿಸಿದ್ದ ಇಂದಿರಾ ಗಾಂಧಿ ಆ ಬಳಿಕ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು ಎಂಬುದನ್ನು ಪ್ರಿಯಾಂಕ್ ಖರ್ಗೆ ಅವರಿಗೆ ನೆನಪಿಸಲು ಬಯಸುತ್ತೇನೆ. ಆರ್‌ಎಸ್‌ಎಸ್‌ ಎಂಬುದು ಒಂದು ಸಾಂಸ್ಕೃತಿಕ ಶಕ್ತಿಯಾಗಿದ್ದು, ರಾಷ್ಟ್ರೀಯತಾವಾದಿ ಚಿಂತನೆಯಿಂದ ಪ್ರೇರಿತವಾದ ಸಂಘಟನೆಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.