ಕೇರಳದ ಕೊಲ್ಲಂನಲ್ಲಿರುವ ವಲ್ಲಿಕುವ ಆಶ್ರಮಕ್ಕೆ ಭೇಟಿ ನೀಡಿದ ಮೋಹನ ಭಾಗವತ್ ಅವರು ದೇಗುಲದ ಆನೆಗೆ ಹಣ್ಣು ನೀಡಿದರು
ಪಿಟಿಐ ಚಿತ್ರ
ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳಿಗ್ಗೆ 6.40ಕ್ಕೆ ದೇಗುಲಕ್ಕೆ ಭೇಟಿ ನೀಡಿದ ಭಾಗವತ್ ಅವರು ಅನಂತ ಶಯನ ಭಗವಾನ್ ವಿಷ್ಣುವಿನ ದರ್ಶನ ಪಡೆದರು.
ಶತಮಾನಗಳಷ್ಟು ಹಳೆಯದಾದ ಅನಂತ ಪದ್ಮನಾಭ ದೇಗುಲದ ನೆಲಮಹಡಿಯ ಕೊಠಡಿಯಲ್ಲಿ ಇದೆ ಎನ್ನಲಾದ ಅಪಾರ ಪ್ರಮಾಣದ ಚಿನ್ನಾಭರಣಗಳಿಂದಾಗಿ ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿ ಸುದ್ದಿಯಲ್ಲಿತ್ತು.
ಅ. 7ರಿಂದ ಕೇರಳ ಪ್ರವಾಸದಲ್ಲಿರುವ ಭಾಗವತ್ ಅವರು, ಆರ್‌ಎಸ್‌ಎಸ್ ರಾಷ್ಟ್ರಮಟ್ಟದ ಪ್ರಮುಖರ ಸಭೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.