ADVERTISEMENT

ಭಾಗವತ್ ಹೇಳಿಕೆಗೆ ಸಹಮತ: ಮನುಷ್ಯರು ಮನುಷ್ಯರಾಗಿಯೇ ಉಳಿಯಬೇಕು –ಕಪಿಲ್ ಸಿಬಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2023, 10:37 IST
Last Updated 11 ಜನವರಿ 2023, 10:37 IST
ಕಪಿಲ್ ಸಿಬಲ್
ಕಪಿಲ್ ಸಿಬಲ್   

ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಸಹಮತ ವ್ಯಕ್ತಪಡಿಸಿದ್ದು, ಮನುಷ್ಯರು ಮನುಷ್ಯರಾಗಿಯೇ ಉಳಿಯಬೇಕು ಎಂದು ಹೇಳಿದ್ದಾರೆ.

ಮೋಹನ್‌ ಭಾಗವತ್‌ ಅವರು, ಆರ್‌ಎಸ್‌ಎಸ್ ಮುಖವಾಣಿಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದೂಸ್ತಾನ್ ಹಿಂದೂಸ್ತಾನವಾಗಿಯೇ ಉಳಿದಿರುವುದರಿಂದ ಮುಸ್ಲಿಮರಿಗೆ ಭಾರತದಲ್ಲಿ ಯಾವುದೇ ಭಯವಿಲ್ಲ ಎಂದು ಹೇಳಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಪಿಲ್‌ ಸಿಬಲ್‌ ಅವರು, ಹಿಂದೂಸ್ತಾನ್ ಹಿಂದೂಸ್ತಾನವಾಗಿಯೇ ಉಳಿಯಬೇಕು ಎಂಬ ಭಾಗವತ್‌ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಮನುಷ್ಯರು ಮನುಷ್ಯರಾಗಿಯೇ ಉಳಿಯಬೇಕು ಎಂದು ಹೇಳಿದ್ದಾರೆ.

ADVERTISEMENT

ಮೋಹನ್‌ ಭಾಗವತ್‌ ಅವರು ದೇಶದಲ್ಲಿ ಮುಸ್ಲಿಮರು ಭಯಪಡಬೇಕಿಲ್ಲ ಎಂದು ಹೇಳಿದ್ದರು. ಹಾಗೂ ಎಲ್‌ಜಿಬಿಟಿ ಸಮುದಾಯವನ್ನು ಗೌರವಿಸಬೇಕು, ಅವರು ಕೂಡ ಸಮಾಜದ ಭಾಗ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.