ADVERTISEMENT

ಅಮೆಜಾನ್ ಈಸ್ಟ್‌ ಇಂಡಿಯಾ ಕಂಪನಿ 2.0: ‘ಪಾಂಚಜನ್ಯ’ ಲೇಖನ

ಪಿಟಿಐ
Published 26 ಸೆಪ್ಟೆಂಬರ್ 2021, 17:34 IST
Last Updated 26 ಸೆಪ್ಟೆಂಬರ್ 2021, 17:34 IST
   

ನವದೆಹಲಿ:ಆರ್‌ಎಸ್‌ಎಸ್‌ನ ವಾರಪತ್ರಿಕೆ ಪಾಂಚಜನ್ಯವು, ‘ಅಮೆಜಾನ್ ಈಸ್ಟ್‌ ಇಂಡಿಯಾ ಕಂಪನಿ 2.0’ ಎಂದು ಹೇಳಿದೆ. ಅಕ್ಟೋಬರ್ 3ರ ಸಂಚಿಕೆಯಲ್ಲಿ ಈ ಸಂಬಂಧ ಮುಖಪುಟ ಲೇಖನವನ್ನು ಪಾಂಚಜನ್ಯವು ಪ್ರಕಟಿಸಿದೆ.

‘18ನೇ ಶತಮಾನದಲ್ಲಿ ಭಾರತವನ್ನು ಆಕ್ರಮಿಸಿಕೊಳ್ಳಲು ಈಸ್ಟ್‌ ಇಂಡಿಯಾ ಕಂಪನಿ ಏನೆಲ್ಲಾ ಮಾಡಿತೋ ಅದನ್ನೇ ಈಗ ಅಮೆಜಾನ್ ಕಂಪನಿ ಮಾಡುತ್ತಿದೆ. ಭಾರತದಲ್ಲಿ ತನ್ನ ಪರವಾಗಿ ನೀತಿ ರೂಪಿಸಿಕೊಳ್ಳಲು ಅಮೆಜಾನ್‌ ಕೋಟ್ಯಂತರ ರೂ ಲಂಚ ನೀಡಿದೆ’ ಎಂದು ಪಾಂಚಜನ್ಯ ಆರೋಪಿಸಿದೆ.

‘ಭಾರತದ ಇ-ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಅಮೆಜಾನ್ ಮುಂದಾಗಿದೆ. ಇದಕ್ಕಾಗಿ ದೇಶದ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ್ತು ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ’ ಎಂದು ಪಾಂಚಜನ್ಯ ಆರೋಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.