RTI
ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳಿಗೆ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ಮೂಲಕ ಇ-ಮೇಲ್ ದೃಢೀಕರಣವನ್ನು ಜೂನ್ 16ರಿಂದ ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೋರ್ಟಲ್‌ನ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವುದರ ಜೊತೆಗೆ ನಾಗರಿಕ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಗರಿಕರು www.rtionline.gov.in - ಪೋರ್ಟಲ್ ಮೂಲಕ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗಳನ್ನು ಸಲ್ಲಿಸಬಹುದು, ಇದು ಬಳಕೆದಾರರಿಗೆ ಮೇಲ್ಮನವಿ ಸಲ್ಲಿಸಲು ಮತ್ತು ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.
‘ನಾಗರಿಕ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪೋರ್ಟಲ್‌ನ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸಲು, ಸೋಮವಾರ, 2025ರ ಜೂನ್ 16 ರಿಂದ ಪ್ರಾರಂಭವಾಗುವ ಎಲ್ಲಾ ಆರ್‌ಟಿಐ ಅರ್ಜಿಗಳಿಗೆ ಒಟಿಪಿ ಮೂಲಕ ಇಮೇಲ್ ದೃಢೀಕರಣವನ್ನು ಜಾರಿಗೆ ತರಲಾಗುತ್ತದೆ’ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಆಡಳಿತಾತ್ಮಕ ನಿಯಂತ್ರಣದಲ್ಲಿರುವ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.