ADVERTISEMENT

ರುಬೈಯಾ ಸಯೀದ್‌ ಅಪಹರಣ ಪ್ರಕರಣ: ಶಂಕಿತನ ಬಂಧಿಸಿದ ಸಿಬಿಐ

ಪಿಟಿಐ
Published 1 ಡಿಸೆಂಬರ್ 2025, 14:19 IST
Last Updated 1 ಡಿಸೆಂಬರ್ 2025, 14:19 IST
<div class="paragraphs"><p>ಬಂಧನ</p></div>

ಬಂಧನ

   

ನವದೆಹಲಿ: ಕೇಂದ್ರದ ಮಾಜಿ ಗೃಹ ಸಚಿವ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರ ಪುತ್ರಿ ರುಬೈಯಾ ಸಯೀದ್‌ ಅವರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ವ್ಯಕ್ತಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.

ಡಿಸೆಂಬರ್‌ 1989ರಲ್ಲಿ ರುಬೈಯಾ ಸಯೀದ್ ಅವರನ್ನು ಜಿಕೆಎಲ್‌ಎಫ್‌ ಉಗ್ರರು ಅಪಹರಿಸಿದ್ದರು. ಆಗ ಮುಫ್ತಿ ಮೊಹಮ್ಮದ್‌ ಅವರು ಗೃಹ ಸಚಿವರಾಗಿದ್ದರು. 36 ವರ್ಷಗಳ ಹಿಂದೆ ನಡೆದ ಅಪರಾಧದಲ್ಲಿ ಭಾಗಿಯಾಗಿದ್ದ, ಶ್ರೀನಗರದ ಇಶ್ಬರ್‌ ನಿಶಾತ್‌ನ ನಿವಾಸಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ADVERTISEMENT

ಅಪಹರಣವಾದ ಐದು ದಿನಗಳ ಬಳಿಕ, ಅಂದಿನ ವಿ.ಪಿ ಸಿಂಗ್‌ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರವು ಐವರು ಭಯೋತ್ಪಾದಕರನ್ನು ಬಿಡುಗಡೆಗೊಳಿಸಿದ ನಂತರ ರುಬೈಯಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ರುಬೈಯಾ ಅವರು ತಮಿಳುನಾಡಿನಲ್ಲಿ ವಾಸಿಸುತ್ತಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್‌ ಮಲ್ಲಿಕ್‌ನಿಗೆ ಭಯೋತ್ಪಾದನೆಗೆ ಹಣದ ನೆರವು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದು, ತಿಹಾರ ಜೈಲಿನಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.