ADVERTISEMENT

ಎಸ್‌–400 ಕ್ಷಿಪಣಿ ಒಪ್ಪಂದಕ್ಕೆ ಭಾರತ– ರಷ್ಯಾ ಬದ್ಧ: ರಾಯಭಾರಿ ನಿಕೊಲಾಯ್‌

ನಿರ್ಬಂಧಗಳು ಕಾನೂನುಬಾಹಿರ‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:53 IST
Last Updated 14 ಏಪ್ರಿಲ್ 2021, 10:53 IST
.
.   

ನವದೆಹಲಿ: ‘ಎಸ್‌–400 ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಬದ್ಧವಾಗಿವೆ’ ಎಂದು ರಷ್ಯಾ ರಾಯಭಾರಿ ನಿಕೊಲಾಯ್‌ ಕುದಶೆವ್‌ ಬುಧವಾರ ಹೇಳಿದ್ದಾರೆ.

ಈ ಕ್ಷಿಪಣಿಗಳನ್ನು ಖರೀದಿಸಿದರೆ ಭಾರತದ ಮೇಲೆ ಅಮೆರಿಕ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

‘ನಿರ್ಬಂಧಗಳಿಗೆ ಭಾರತ ಮತ್ತು ರಷ್ಯಾ ಮಾನ್ಯತೆ ನೀಡುವುದಿಲ್ಲ. ನಿರ್ಬಂಧ ಹೇರುವುದೇ ಕಾನೂನುಬಾಹಿರ. ಇದೊಂದು ಬ್ಲ್ಯಾಕ್‌ಮೇಲ್‌. ಅಪ್ರಾಮಾಣಿಕ ಮತ್ತು ಅಕ್ರಮ ಸ್ಪರ್ಧೆಯನ್ನು ಇದು ಒಳಗೊಂಡಿದೆ. ಒತ್ತಡ ಹೇರುವ ತಂತ್ರ ಇದಾಗಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

’ನಿಗದಿಪಡಿಸಿದ ಅವಧಿಯಲ್ಲಿ ಕ್ಷಿಪಣಿ ಪೂರೈಸಲು ಬದ್ಧರಾಗಿದ್ದೇವೆ. ಈ ಒಪ್ಪಂದವನ್ನು ಜಾರಿಗೊಳಿಸಲಿದ್ದೇವೆ. ಜಗತ್ತು ಏಕಪಕ್ಷೀಯ ಆದೇಶಗಳಿಂದ ಮತ್ತು ಕಾನೂನುಬಾಹಿರ ನಿರ್ಬಂಧಗಳಿಂದ ಹಾಗೂ ದ್ವಿಮುಖ ನೀತಿಯಿಂದ ಮುಕ್ತವಾಗಿರಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ವರ್ಷದ ಅಂತ್ಯಕ್ಕೆ ಎಸ್‌–400 ಕ್ಷಿಪಣಿಗಳನ್ನು ಭಾರತಕ್ಕೆ ರಷ್ಯಾ ಪೂರೈಸುವ ಸಾಧ್ಯತೆ ಇದೆ. ಎಸ್‌–400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕಾಗಿ ಟರ್ಕಿ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.