ADVERTISEMENT

ರಷ್ಯಾ-ಉಕ್ರೇನ್ ಬಿಕ್ಕಟ್ಟು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು: ರಕ್ಷಣಾ ಸಚಿವ

ಪಿಟಿಐ
Published 24 ಫೆಬ್ರುವರಿ 2022, 13:57 IST
Last Updated 24 ಫೆಬ್ರುವರಿ 2022, 13:57 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ನವದೆಹಲಿ: ರಷ್ಯಾ-ಉಕ್ರೇನ್ ಮಧ್ಯೆ ಉಂಟಾಗಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರತಿಳಿಸಿದ್ದಾರೆ.

'ಶಾಂತಿ ನೆಲೆಗೊಳ್ಳಬೇಕು ಎಂದು ಭಾರತ ಬಯಸುತ್ತದೆ. ರಷ್ಯಾ ಜೊತೆ ಮಾತುಕತೆ ನಡೆಸಲು ಅಮೆರಿಕ ಸಿದ್ಧವಾಗಿದೆ. ಚರ್ಚೆಗಳು ನಡೆದಾಗ ಯಾವುದಾದರೂ ಉತ್ತಮ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ' ಎಂದು ಹೇಳಿದರು.

ಭಾರತದ ನಿಲುವಿನ ಬಗ್ಗೆ ಕೇಳಿದಾಗ, 'ನಾವು ಶಾಂತಿಯನ್ನು ಬಯಸುತ್ತೇವೆ. ನಾವು ಯಾವಾಗಲೂ ವಿಶ್ವಶಾಂತಿಯ ಪರವಾಗಿರುತ್ತೇವೆ' ಎಂದು ಹೇಳಿದರು.

ಉಕ್ರೇನ್ ಮೇಲೆ ರಷ್ಯಾ ಗುರುವಾರ ದಾಳಿ ನಡೆಸಿದೆ. ಇದುವರೆಗೆ 40ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಹಾಗೂ ಸುಮಾರು 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಷ್ಯಾಗೆ ಉಕ್ರೇನ್ ಕೂಡ ತಿರುಗೇಟು ನೀಡುತ್ತಿದೆ.

ಈ ನಡುವೆ ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ತಟಸ್ಥ ನಿಲುವನ್ನು ತೆಗೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ.ರಾಜಕುಮಾರ್ ರಂಜನ್ ಸಿಂಗ್, 'ಭಾರತದ ನಿಲುವು ತಟಸ್ಥವಾಗಿರಲಿದೆ ಮತ್ತು ವಿವಾದ ಶಾಂತಿಯುತವಾಗಿ ಬಗೆಹರಿಯುವುದಾಗಿ ನಿರೀಕ್ಷಿಸುತ್ತೇವೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.