
ಉಣ್ಣಿಕೃಷ್ಣನ್ ಪೋಟಿ, ಶಬರಿಮಲೆ
(ಎಕ್ಸ್ ಚಿತ್ರ)
ಕೊಲ್ಲಂ (ಕೇರಳ): ಶಬರಿಮಲೆ ದೇಗುಲದ ಚಿನ್ನ ಕಳವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿ ಅವರಿಗೆ ಕೇರಳದ ನ್ಯಾಯಾಲಯವೊಂದು ಬುಧವಾರ ಜಾಮೀನು ನೀಡಿದೆ.
ಚಿನ್ನ ಕಳವಿನ ಎರಡನೇ ಪ್ರಕರಣದಲ್ಲಿ ಕೇರಳದ ವಿಜಿಲೆನ್ಸ್ ನ್ಯಾಯಾಲಯವು ಕಾನೂನಿನ್ವಯ ಜಾಮೀನು ಮಂಜೂರು ಮಾಡಿದೆ.
ಇದೀಗ ಎರಡೂ ಪ್ರಕರಣಗಳಲ್ಲಿ ಜಾಮೀನು ದೊರೆತಿರುವುದರಿಂದ ಜೈಲಿನಿಂದ ಪೋಟಿ ಬಿಡುಗಡೆಯ ಹಾದಿ ಸುಗಮವಾಗಿದೆ.
ಶ್ರೀಕೋವಿಲ್ ಬಾಗಿಲು ಚೌಕಟ್ಟಿನ ಚಿನ್ನ ಕಳವು ಪ್ರಕರಣದಲ್ಲಿ ಜನವರಿ 21ರಂದು ಪೋಟಿ ಅವರಿಗೆ ಜಾಮೀನು ದೊರೆತಿತ್ತು.
ಪ್ರಕರಣ ದಾಖಲಾಗಿ 90 ದಿನ ಕಳೆದರೂ ಕಾನೂನಿನ್ವಯ ವಿಶೇಷ ತನಿಖಾ ತಂಡ (ಎಸ್ಐಟಿ) ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ ಜಾಮೀನು ನೀಡಬೇಕು ಎಂದು ಪೋಟಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಎಸ್‌ಐಟಿ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಸಿಜು ರಾಜನ್, ಪೋಟಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.
ಎರಡು ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿಯು ಈವರೆಗೆ 12 ಮಂದಿಯನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.