ADVERTISEMENT

ಹೇಳಿಕೆಯನ್ನು ಹಿಂಪಡೆದು, ಕ್ಷಮೆಯಾಚಿಸುತ್ತಿದ್ದೇನೆ: ಸಾಧ್ವಿ ಪ್ರಗ್ಯಾ ಠಾಕೂರ್

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:17 IST
Last Updated 9 ಮೇ 2019, 17:17 IST
   

ನವದೆಹಲಿ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ ಎಂದು ಹೇಳಿ ವಿವಾದಕ್ಕೀಡಾಗಿದ್ದ ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಠಾಕೂರ್ ಕ್ಷಮೆಯಾಚಿಸಿದ್ದಾರೆ.

ನನ್ನ ಹೇಳಿಕೆಯಿಂದಾಗಿ ದೇಶದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳುತ್ತಿದ್ದೇನೆ.ಅದು ನನ್ನ ವೈಯಕ್ತಿಕ ನೋವು ಆಗಿತ್ತು ಎಂದು ಸಾಧ್ವಿ ಪ್ರಗ್ಯಾ ಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ.

ಹೇಮಂತ್ ಕರ್ಕರೆ ಅವರು ಶತ್ರುರಾಷ್ಟ್ರದವರ ಗುಂಡಿಗೆ ಬಲಿಯಾದವರು.ಅವರು ಖಂಡಿತಾ ಹುತಾತ್ಮರು ಎಂದಿದ್ದಾರೆ ಸಾಧ್ವಿ.

ADVERTISEMENT

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್, ಮಾಲೇಗಾಂವ್ ಸ್ಫೋಟದ ಆರೋಪಿಯಾಗಿದ್ದಾರೆ.ತನ್ನ ವಿರುದ್ಧವಿರುವ ಪ್ರಕರಣದ ವಿಚಾರಣೆ ವೇಳೆ ಕರ್ಕರೆ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದರು.ಆಗ ನಾನು ನೀನು ಸರ್ವನಾಶ ಆಗುತ್ತೀಯಾ ಎಂದು ಶಪಿಸಿದ್ದೆ.ನನ್ನ ಶಾಪದಿಂದಾಗಿ ಕರ್ಕರೆ ಸತ್ತರು ಎಂದು ಹೇಳಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.