ADVERTISEMENT

ಜೈಲಿನಲ್ಲಿ ನೀಡಿದ ಕಿರುಕುಳದ ಬಗ್ಗೆ ಹೇಳಿ ಕಣ್ಣೀರಿಟ್ಟ ಸಾಧ್ವಿ ಪ್ರಗ್ಯಾ

ಏಜೆನ್ಸೀಸ್
Published 9 ಮೇ 2019, 16:52 IST
Last Updated 9 ಮೇ 2019, 16:52 IST
   

ಭೋಪಾಲ್: ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸ್ಲಿಮರ ಹತ್ಯೆ ಬಗ್ಗೆ ತಪ್ಪೊಪ್ಪಿಕೊಳ್ಳುವುದಕ್ಕಾಗಿ ಜೈಲು ಅಧಿಕಾರಿಗಳುಕಿರುಕುಳ ನೀಡಿದ್ದಾರೆ ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ.ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಪ್ರಗ್ಯಾ.

ಮುಸ್ಲಿಮರನ್ನು ಕೊಲ್ಲುವುದಕ್ಕಾಗಿ ನಾನು ಸ್ಫೋಟ ನಡೆಸಿದೆ ಎಂದು ಹೇಳುವಂತೆ ಜೈಲು ಅಧಿಕಾರಿಗಳು ನನ್ನನ್ನು ಒತ್ತಾಯಿಸಿದ್ದರು.ನನ್ನನ್ನು ಅಕ್ರಮವಾಗಿ ಬಂಧಿಸಿಮುಳ್ಳಿನ ಬೆಲ್ಟ್‌ನಿಂದ ಅವರು ಹೊಡೆದಿದ್ದಾರೆ. ನನ್ನನ್ನು ಅಸಭ್ಯ ಭಾಷೆಯಲ್ಲಿ ಬೈದ ಅವರು, ಬಟ್ಟೆ ಕಳಚಿ ನಗ್ನ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು.

ಗುರುವಾರ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಗ್ಯಾ ತಮ್ಮ ಜೈಲುವಾಸದ ಅನುಭವಗಳನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.

ADVERTISEMENT

2008 ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ನಡೆದ ಸ್ಫೋಟದ ಆರೋಪಿಯಾಗಿದ್ದಾರೆ ಸಾಧ್ವಿ ಪ್ರಗ್ಯಾ.ಈ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿಗೆ ಗಾಯಗಳಾಗಿತ್ತು.

ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಉಗ್ರ ನಿಗ್ರಹ ದಳ ಪ್ರಗ್ಯಾ ಅವರನ್ನು ಬಂಧಿಸಿದ್ದು,2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಪ್ರಕರಣದ ತನಿಖೆ ಕೈಗೊಂಡಿತ್ತು. ಈಕೆಯ ವಿರುದ್ಧ ಸಾಕ್ಷ್ಯಗಳು ಇಲ್ಲದೇ ಇರುವಕಾರಣ ರಾಷ್ಟ್ರೀಯ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.