ADVERTISEMENT

ಭಾರತ ವಿರೋಧಿ ಕೂಟದಲ್ಲಿ ಕಾಂಗ್ರೆಸ್‌: ಬಿಜೆಪಿ ಆರೋಪ

ಪಿಟಿಐ
Published 27 ಡಿಸೆಂಬರ್ 2025, 15:02 IST
Last Updated 27 ಡಿಸೆಂಬರ್ 2025, 15:02 IST
ಸುಧಾಂಶು ತ್ರಿವೇದಿ
ಸುಧಾಂಶು ತ್ರಿವೇದಿ   

ನವದೆಹಲಿ: ‘ಕಾಂಗ್ರೆಸ್‌ ಪಕ್ಷವು ಭಾರತ ವಿರೋಧಿ ಜಾಗತಿಕ ಮೈತ್ರಿಕೂಟದ ಭಾಗವಾಗಿದೆ ಎಂಬುದನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್‌ ಪಿತ್ರೊಡಾ ಬಹಿರಂಗಪಡಿಸಿದ್ದಾರೆ’ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕಾಗಿಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪದೇ ಪದೇ ವಿದೇಶಗಳಿಗೆ ಭೇಟಿ ನೀಡುತ್ತಾರೆ ಎಂದು ದೂರಿದೆ.  

ಪಿತ್ರೊಡಾ ಅವರು ಸುದ್ದಿ ವಾಹಿನಿಯೊಂದಕ್ಕೆ ಶುಕ್ರವಾರ ನೀಡಿದ್ದ ಸಂದರ್ಶನವನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಕಿಡಿಕಾರಿದರು. 

ಜಾಗತಿಕ ಪ್ರಗತಿಶೀಲ ಒಕ್ಕೂಟದಲ್ಲಿ (ಜಿಪಿಎ) ಕಾಂಗ್ರೆಸ್‌ ಅಧಿಕೃತ ಸ್ಥಾನ ಹೊಂದಿದೆ ಎಂದು ಪಿತ್ರೊಡಾ ಅವರು ಅಜಾಗರೂಕತೆಯಿಂದ ಬಾಯಿಬಿಟ್ಟಿದ್ದಾರೆ. ಭಾರತ ವಿರೋಧಿ ಸಂಕಥನಗಳನ್ನು ತೇಲಿ ಬಿಡುವುದರಲ್ಲಿ ತೊಡಗಿರುವ ಜೆಪಿಎ ಜತೆ ಕಾಂಗ್ರೆಸ್‌ ಕೈಜೋಡಿಸಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.  

ADVERTISEMENT

‘ರಾಹುಲ್‌ ಅವರು ಭಾರತ ವಿರೋಧಿ ಶಕ್ತಿಗಳ ಬೆಂಬಲ ಪಡೆದು ಅಧಿಕಾರ ಪಡೆಯುವ ಹಗಲುಗನಸು ಕಾಣುತ್ತಿದ್ದಾರೆ’ ಎಂದು ಅವರು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.