ADVERTISEMENT

ಸಂಭಲ್‌ ಹಿಂಸಾಚಾರ | ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುತ್ತೇವೆ: ಕೃಶನ್‌ ಕುಮಾರ್‌

ಪಿಟಿಐ
Published 19 ಜೂನ್ 2025, 15:49 IST
Last Updated 19 ಜೂನ್ 2025, 15:49 IST
   

ಸಂಭಲ್‌ : ‘ಕಳೆದ ವರ್ಷ ನವೆಂಬರ್‌ 24ರಂದು ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರಕ್ಕೆ ಕಾರಣರಾದವರಿಗೆ ಶಿಕ್ಷೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಂಭಲ್‌ನ ಪೊಲೀಸ್‌ ವರಿಷ್ಠಾಧಿಕಾರಿ ಕೃಶನ್‌ ಕುಮಾರ್‌ ಬಿಷ್ಣೋಯಿ ಗುರುವಾರ ಹೇಳಿದರು.

ಹಿಂಸಾಚಾರಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್‌ ರೆಹಮಾನ್‌ ಬರ್ಕ್‌ ಸೇರಿದಂತೆ 22 ಮಂದಿ ವಿರುದ್ಧ ಪೊಲೀಸರು ಬುಧವಾರ ಚಾರ್ಚ್‌ಶೀಟ್‌ ಸಲ್ಲಿಸಿದ್ದಾರೆ. ಈ ಕುರಿತು ಪತ್ರಕರ್ತರಿಗೆ ಕೃಶನ್‌ ಪ್ರತಿಕ್ರಿಯಿಸಿದರು.

‘ಸಂಸದ ಬರ್ಕ್‌ ಮತ್ತು ಮಸೀದಿಯ ಅಧ್ಯಕ್ಷ ಜಾಫರ್‌ ಅಲಿ ಅವರ ಮಧ್ಯೆ ರಾತ್ರೊರಾತ್ರಿ ನಡೆದಿದ್ದ ಸಂಭಾಷಣೆಯ ವಿವರಗಳು ಚಾರ್ಚ್‌ಶೀಟ್‌ನಲ್ಲಿವೆ. ನ.22ರಂದು ಮಸೀದಿ ಬಳಿ ಇವರೇ ಜನರನ್ನು ಸೇರಿಸಿದ್ದರು. ಆರೋಪ ಸಾಬೀತು ಮಾಡಲು ಬೇಕಿರುವ ಎಲ್ಲ ರೀತಿಯ ಸಾಕ್ಷ್ಯಗಳನ್ನು, ದಾಖಲೆಗಳನ್ನು ಸಂಗ್ರಹ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.