ADVERTISEMENT

ಸಂಭಲ್‌: ‘ಜಾಮಾ ಮಸೀದಿ’ ಅಲ್ಲ ಇನ್ನುಮುಂದೆ ‘ಜುಮಾ ಮಸೀದಿ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:11 IST
Last Updated 8 ಏಪ್ರಿಲ್ 2025, 14:11 IST
<div class="paragraphs"><p>ಜಾಮಾ ಮಸೀದಿ ಸುತ್ತಲೂ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು</p></div>

ಜಾಮಾ ಮಸೀದಿ ಸುತ್ತಲೂ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು

   

–ಪಿಟಿಐ ಚಿತ್ರ

ಲಖನೌ: ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ‘ಜಾಮಾ ಮಸೀದಿ’ಯನ್ನು ‘ಜುಮಾ ಮಸೀದಿ’ ಎಂದು ಮರುನಾಮಕರಣ ಮಾಡಲು ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ನಿರ್ಧರಿಸಿದೆ ಎನ್ನಲಾಗಿದೆ.

ADVERTISEMENT

ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ‘ಹೊಸ ಹೆಸರಿನ ಬೋರ್ಡ್‌ ಕೂಡ ಸಿದ್ಧವಾಗಿದೆ, ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ನೂತನ ಹೆಸರಿನ ಬೋರ್ಡ್‌ ಅನ್ನು ಮಸೀದಿಗೆ ಹಾಕಲಾಗುವುದು’ ಎಂದರು.

‘ಜಾಮಾ ಮಸೀದಿ’ಯ ಮೂಲ ಹೆಸರು ‘ಜುಮಾ ಮಸೀದಿ’ ಎಂದೇ ಆಗಿತ್ತು. ಪುರಾತತ್ವ ಇಲಾಖೆಯ ದಾಖಲೆಗಳಲ್ಲಿಯೂ ‘ಜುಮಾ ಮಸೀದಿ’ ಎಂದೇ ಇದೆ’ ಎಂದರು.

‘ಇದೇ ವಿಚಾರವಾಗಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆಯೊಂದು ನಡೆಯುತ್ತಿದೆ. ಈ ಪ್ರಕರಣದಲ್ಲಿಯೂ ಇಲಾಖೆಯು ಜಾಮಾ ಮಸೀದಿಯ ಹೆಸರು ಜುಮಾ ಮಸೀದಿ ಎಂದೇ ದಾಖಲೆ ನೀಡಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.