ADVERTISEMENT

ಸಮೋಸಾ, ಗುಟ್ಕಾ, ಪಾನ್‌ಬೀಡಾ, ರಸಗುಲ್ಲ ಕೋರಿ ಕೋವಿಡ್‌–19 ಸಹಾಯವಾಣಿಗೆ ಕರೆ!

ಪಿಟಿಐ
Published 18 ಏಪ್ರಿಲ್ 2020, 9:08 IST
Last Updated 18 ಏಪ್ರಿಲ್ 2020, 9:08 IST
   

ಲಖನೌ:ಉತ್ತರ ಪ್ರದೇಶದ ಜನರು ಸರ್ಕಾರದ ಕೋವಿಡ್‌–19ಸಹಾಯವಾಣಿಗೆ ಕರೆ ಮಾಡಿ ಪಾನ್‌ಬೀಡಾ,ಗುಟ್ಕಾ, ಬಿಸಿಬಿಸಿ ಸಮೋಸಾ, ಪಿಜ್ಜಾ, ರಸಗುಲ್ಲ, ಐಸ್‌ಕ್ರೀಮ್‌ ಬೇಕೆಂದು ಕೇಳುತ್ತಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಬಾಧಿತ ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದು. ಲಾಕ್‌ಡೌನ್‌ ಆಗಿರುವುದರಿಂದ ಜನರಿಗೆ ಅಗತ್ಯ ವಸ್ತುಗಳು ಹಾಗೂ ತುರ್ತು ಔಷದಿ ಪೂರೈಕೆ ಮಾಡಲು ಸರ್ಕಾರನಾಗರಿಕರಿಗೆಸಹಾಯವಾಣಿ ತೆರೆದಿದೆ. ಈಗಾಗಲೇ ಲಕ್ಷಾಂತರ ಜನರು ಕರೆ ಮಾಡಿ ನೆರವು ಪಡೆದುಕೊಂಡಿದ್ದಾರೆ.

ಆದರೆ ಕೆಲವರು, ಗುಟ್ಕಾ, ಎಲೆ ಅಡಿಕೆ, ಬಿಸಿಬಿಸಿ ಸಮೋಸಾ, ಪಿಜ್ಜಾ, ರಸಗುಲ್ಲ ಬೇಕು ಎಂದು ಕೇಳುತ್ತಿದ್ದಾರೆ. ಪೊಲೀಸ್‌ ಅಂಕಲ್‌ ನಮಗೆ, ಐಸ್‌ಕ್ರೀಮ್‌, ಚಿಪ್ಸ್‌, ಕೇಕ್‌ ಬೇಕು ಎಂದು ಮಕ್ಕಳು ಸಹ ಕರೆ ಮಾಡಿ ಕೇಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಪೊಲೀಸರು ಕರೆ ಮಾಡಿದವರ ವಯಸ್ಸನ್ನು ಕೇಳಿ, ಸಕ್ಕರೆ ಅಂಶ ಕಡಿಮೆ ಇರುವ ಹಿರಿಯ ನಾಗರಿಕರಿಗೆ ವೈದ್ಯರ ಸಲಹೆಯಂತೆ ಸಿಹಿ ತಿಂಡಿಗಳನ್ನು ಪೂರೈಕೆ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಎರಡು ಸಹಾಯವಾಣಿಗಳು ಕೆಲಸ ಮಾಡುತ್ತಿವೆ. ಒಂದನ್ನು ಸರ್ಕಾರ ನಿರ್ವಹಣೆ ಮಾಡುತ್ತಿದ್ದರೆ, ಮತ್ತೊಂದನ್ನು ಪೊಲೀಸರು ನಿಭಾಯಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಪೊಲೀಸರು ಇಲಾಖೆಯ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ.

ನಾಗರಿಕರು ತಮ್ಮ ಇಷ್ಟದ ಪದಾರ್ಥಗಳು ಹಾಗೂ ವ್ಯಸನದ ವಸ್ತುಗಳನ್ನು ಸಹಾಯವಾಣಿ ಮೂಲಕ ಕೋರುತ್ತಿರುವುದು ಪೊಲೀಸರಿಗೆ ತಲೆ ನೋವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.