ADVERTISEMENT

ಜೈವಿಕ ವಿಲೇವಾರಿ ಬ್ಯಾಗ್‌ ಕಡ್ಡಾಯ: ಪ್ರಕಾಶ್‌ ಜಾವಡೇಕರ್‌

ಪಿಟಿಐ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ಪ್ರಕಾಶ್‌ ಜಾವಡೇಕರ್‌
ಪ್ರಕಾಶ್‌ ಜಾವಡೇಕರ್‌   

ಪುಣೆ: ‘ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದಿಸುವ ಕಂಪನಿಗಳು ಜೈವಿಕವಾಗಿ ವಿಲೇವಾರಿ ಮಾಡುವಂಥ ಬ್ಯಾಗ್‌ ನೀಡುವುದನ್ನು ಜನವರಿಯಿಂದ ಕಡ್ಡಾಯ ಮಾಡಲಾಗುವುದು’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಇಲ್ಲಿ ಹೇಳಿದರು.

ವಿಶ್ವ ಮಹಿಳಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಎಷ್ಟೇ ಬಾರಿ ಹೇಳಿದರೂ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಕರು ನ್ಯಾಪ್ಕಿನ್‌ಗಳ ಜತೆ, ಜೈವಿಕವಾಗಿ ವಿಲೇವಾರಿ ಮಾಡುವ ಬ್ಯಾಗ್‌ಗಳನ್ನು ನೀಡದಿರುವುದನ್ನು ಗಮನಿಸುತ್ತಿದ್ದೇನೆ. ಆದ್ದರಿಂದ 2021ರ ಜನವರಿಯಿಂದ ಬ್ಯಾಗ್‌ ನೀಡುವುದನ್ನು ಸರ್ಕಾರ ಕಡ್ಡಾಯ ಮಾಡಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT