ADVERTISEMENT

ಅನಾರೋಗ್ಯ | ಜನ ಸಂಪರ್ಕದಿಂದ ದೂರ ಇರುವಂತೆ ವೈದ್ಯರ ಸೂಚನೆ: ಸಂಜಯ್ ರಾವುತ್

ಪಿಟಿಐ
Published 31 ಅಕ್ಟೋಬರ್ 2025, 11:16 IST
Last Updated 31 ಅಕ್ಟೋಬರ್ 2025, 11:16 IST
ಸಂಜಯ್ ರಾವುತ್ 
ಸಂಜಯ್ ರಾವುತ್    

ಮುಂಬೈ: ‘ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಜನ ಸಂಪರ್ಕದಿಂದ ದೂರ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ’ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ  ಮಾಹಿತಿ ಹಂಚಿಕೊಂಡಿರುವ ಅವರು,‘ನೀವೆಲ್ಲರೂ ನನಗೆ ಪ್ರೀತಿ ನೀಡಿದ್ದೀರಿ, ನಂಬಿಕೆ ಇಟ್ಟುಕೊಂಡಿದ್ದೀರಿ, ಆದರೆ ನನಗೆ ಗಂಭೀರವಾದ ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರ ಸಲಹೆಯಿಂದ ಇದರಿಂದ ಹೊರಬರುತ್ತೇನೆ. ವೈದ್ಯರು ಹೊರಹೋಗದಂತೆ, ಜನ ಸಂಪರ್ಕದಿಂದ ದೂರ ಇರುವಂತೆ ಸೂಚಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. 

ಆದರೆ ಯಾವ ರೀತಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎನ್ನುವ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ADVERTISEMENT

ನ.1 ರಂದು ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ನಡೆಸಲಿರುವ ಪ್ರತಿಭಟನೆಯಲ್ಲಿ ಸಂಜಯ್ ರಾವುತ್ ಭಾಗವಹಿಸುವ ನಿರೀಕ್ಷೆಯಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.