ಪಟ್ನಾ : ಜೆಡಿಯು ನಾಯಕ, ಮಾಜಿ ಸಂಸದರೂ ಅಗಿರುವ ಸಂತೋಷ್ ಕುಶ್ವಾಹ ಅವರು ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಆರ್‌ಜೆಡಿ ಸೇರಿದ್ದಾರೆ.
ಮಾಜಿ ಶಾಸಕ ರಾಹುಲ್ ಶರ್ಮಾ ಅವರೂ ಜೆಡಿಯು ತೊರೆದು ಆರ್‌ಜೆಡಿ ಸೇರಿದರು. ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ಶುಕ್ರವಾರ ಇಬ್ಬರೂ ಆರ್‌ಜೆಡಿಗೆ ಸೇರ್ಪಡೆಯಾದರು.
ಕುಶ್ವಾಹ ಅವರು ಪೂರ್ಣಿಯಾ ಲೋಕಸಭಾ ಕ್ಷೇತ್ರದಿಂದ ಜೆಡಿಯು ಟಿಕೆಟ್‌ನಿಂದ ಸ್ಪರ್ಧಿಸಿ ಸತತ ಎರಡು ಸಲ (2014 ಮತ್ತು 2019) ಗೆದ್ದಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪಪ್ಪು ಯಾದವ್ ಎದುರು ಸೋತಿದ್ದರು.
ಲೋಕ ಜನಶಕ್ತಿ ಪಾರ್ಟಿ ನಾಯಕ ಅಜಯ್ ಕುಶ್ವಾಹ ಮತ್ತು ಬಾಂಕಾ ಕ್ಷೇತ್ರದ ಸಂಸದ ಗಿರಿಧಾರಿ ಪ್ರಸಾದ್ ಯಾದವ್ ಅವರ ಪುತ್ರ ಚಾಣಕ್ಯ ಪ್ರಸಾದ್ ರಂಜನ್ ಕೂಡಾ ಆರ್‌ಜೆಡಿ ಸೇರ್ಪಡೆಯಾದರು.
ಕುಶ್ವಾಹ ಮತ್ತು ಭೂಮಿಹಾರ್ ಸಮುದಾಯಗಳ ಬೆಂಬಲ ಪಡೆಯುವ ತಂತ್ರದ ಭಾಗವಾಗಿ ಆರ್‌ಜೆಡಿಯು ಈ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.