ADVERTISEMENT

ಸಾವರ್ಕರ್‌ ಪ್ರಕರಣ | ಹೇಳಿಕೆ ಹಿಂದಕ್ಕೆ: ರಾಹುಲ್‌ ಪರ ವಕೀಲ ಮಿಲಿಂದ ಪವಾರ್‌

ಪಿಟಿಐ
Published 14 ಆಗಸ್ಟ್ 2025, 0:12 IST
Last Updated 14 ಆಗಸ್ಟ್ 2025, 0:12 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

(ಪಿಟಿಐ ಚಿತ್ರ)

ಮುಂಬೈ/ ನವದೆಹಲಿ: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಸಮ್ಮತಿ ಪಡೆಯದೇ ನ್ಯಾಯಾಲಯದಲ್ಲಿ ದಾಖಲಿಸಿದ್ದ ಹೇಳಿಕೆಯನ್ನು ಹಿಂಪಡೆಯುವುದಾಗಿ’ ರಾಹುಲ್‌ ಪರ ವಕೀಲ ಮಿಲಿಂದ ಪವಾರ್‌ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. 

ADVERTISEMENT

ವಿ.ಡಿ.ಸಾವರ್ಕರ್‌ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ. ಸಾರ್ವಕರ್‌ ಅವರ ಮೊಮ್ಮಗ ಸತ್ಯಕಿ ಸಾರ್ವಕರ್‌ ಈ ಮೊಕದ್ದಮೆ ಹೂಡಿದ್ದಾರೆ. 

‘ವಿ.ಡಿ. ಸಾವರ್ಕರ್‌ ಮತ್ತು ನಾಥೂರಾಂ ಗೋಡ್ಸೆ ಅನುಯಾಯಿಗಳಿಂದ ರಾಹುಲ್‌ ಅವರ ಜೀವಕ್ಕೆ ಅಪಾಯವಿದೆ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅದಕ್ಕೆ ತಮ್ಮ ಸಮ್ಮತಿ ಇಲ್ಲದ ಕಾರಣ ರಾಹುಲ್‌ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಹೀಗಾಗಿ ವಕೀಲರು ಈ ಹೇಳಿಕೆಯನ್ನು ಹಿಂಪಡೆಯುವುದಾಗಿ’ ತಿಳಿಸಿದ್ದಾರೆ ಎಂದು ಕಾಂಗ್ರೆಸ್‌ ಮಾಧ್ಯಮ ವಕ್ತಾರ ಪವನ್‌ ಖೇರಾ ತಿಳಿಸಿದರು.  

‘ಹೇಳಿಕೆಯನ್ನು ಹಿಂಪಡೆಯಲು ಗುರುವಾರ ಅರ್ಜಿ ಸಲ್ಲಿಸುತ್ತೇನೆ’ ಎಂದು ವಕೀಲ ಮಿಲಿಂದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.