ADVERTISEMENT

ಪಾಕ್‌ ಜೈಲಿನಲ್ಲಿರುವ ಮಗನ ಕರೆತರಲು ಸೂಚಿಸಿ: ಸುಪ್ರೀಂಗೆ 81 ವರ್ಷದ ತಾಯಿ ಮನವಿ

ಪಿಟಿಐ
Published 5 ಮಾರ್ಚ್ 2021, 11:34 IST
Last Updated 5 ಮಾರ್ಚ್ 2021, 11:34 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿ 23 ವರ್ಷಗಳಿಂದ ಇರುವ ತನ್ನ ಪುತ್ರ, ಸೇನೆ ಅಧಿಕಾರಿಯ ವಾಪಸಾತಿಗೆ ರಾಜತಾಂತ್ರಿಕ ಹಂತದಲ್ಲಿ ಕ್ರಮವಹಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸೇನಾ ಅಧಿಕಾರಿಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು ಈ ಕುರಿತು ವಿವರಣೆ ಸಲ್ಲಿಸಲು ಸೂಚಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿತು.

ಪಾಕ್‌ ಜೈಲಿನಲ್ಲಿ ಇರುವ ಕ್ಯಾಪ್ಟನ್‌ ಸಂಜಿತ್ ಭಟ್ಟಾಚಾರ್ಜಿ ಅವರ ತಾಯಿ, 81 ವರ್ಷದ ಕಮಲಾ ಅವರು ಅರ್ಜಿ ಸಲ್ಲಿಸಿದ್ದರು. ಮಾನವೀಯ ಆಧಾರದಲ್ಲಿ ಈ ಬಗ್ಗೆ ತುರ್ತಾಗಿ ಗಮನಹರಿಸಬೇಕು ಎಂದೂ ಕೋರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.