ADVERTISEMENT

ಸಲಿಂಗ ಮದುವೆ: ಇದೇ 24ಕ್ಕೆ ಒಂದು ಗಂಟೆ ಮುಂಚೆ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

ಪಿಟಿಐ
Published 21 ಏಪ್ರಿಲ್ 2023, 11:48 IST
Last Updated 21 ಏಪ್ರಿಲ್ 2023, 11:48 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠ ಇದೇ 24ರಂದು ನಿಗದಿಗಿಂತ ಒಂದು ಗಂಟೆ ಮೊದಲು ಅಂದರೆ ಬೆಳಿಗ್ಗೆ 9.30ಕ್ಕೆ ಕಲಾಪ ಆರಂಭಿಸಲಿದೆ. ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಅಂದು ನಡೆಯಲಿದೆ.

‘ನಾವು ಒಂದು ಗಂಟೆ ಮೊದಲೇ ಅಂದರೆ ಬೆಳಿಗ್ಗೆ 9.30ಕ್ಕೆ ನ್ಯಾಯಪೀಠದಲ್ಲಿ ಕೂರಲಿದ್ದೇವೆ, ಇದರಿಂದ ಕೆಲವು ತುರ್ತು ವಿಷಯಗಳ ವಿಚಾರಣೆ ನಡೆಸಬಹುದು‘ ಎಂದು ಚಂದ್ರಚೂಡ್‌ ಅವರು ಹೇಳಿದ್ದಾರೆ.

ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಸ್‌ .ಕೆ ಕೌಲ್‌, ಎಸ್‌.ಆರ್‌.ಭಟ್‌, ಹಿಮಾ ಕೊಹ್ಲಿ ಮತ್ತು ಪಿ.ಎಸ್‌. ನರಸಿಂಹ ಅವರು ನಡೆಸಲಿದ್ದಾರೆ.

ADVERTISEMENT

ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬೆಳಿಗ್ಗೆ 10.30ಕ್ಕೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.