ADVERTISEMENT

ಸುಬ್ರತ ರಾಯ್‌ಗೆ ‘ಸುಪ್ರೀಂ’ ತಾಕೀತು

ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಸಹರಾ ಗ್ರೂಪ್ ವಿಫಲ

ಪಿಟಿಐ
Published 31 ಜನವರಿ 2019, 20:32 IST
Last Updated 31 ಜನವರಿ 2019, 20:32 IST

ನವದೆಹಲಿ: ಹೂಡಿಕೆದಾರರಿಗೆ ₹25,700 ಕೋಟಿ ಹಿಂದಿರುಗಿಸಲು ವಿಫಲವಾಗಿರುವ ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತ ರಾಯ್ ಫೆಬ್ರುವರಿ 28ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಗುರುವಾರ ತಾಕೀತು ಮಾಡಿದೆ.

‘ಹಣ ಹಿಂದಿರುಗಿಸಲು ಆರು ತಿಂಗಳ ಕಾಲವಕಾಶ ನೀಡಲಾಗಿತ್ತು. ಆದರೆ,‌ ₹15,000 ಕೋಟಿಯನ್ನಷ್ಟೇ ಠೇವಣಿ ಮಾಡಲಾಗಿದೆ. ಈವರೆಗೆ ವರ್ಗಾವಣೆಯಾಗಿರುವ ಹಣ ನ್ಯಾಯಾಲಯಕ್ಕೆ ಸಹರಾ ಗ್ರೂಪ್‌ ಬಗ್ಗೆ ವಿಶ್ವಸಾರ್ಹತೆ ಉಂಟುಮಾಡಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ಹೆಚ್ಚಿನ ಕಾಲವಕಾಶ ಅಥವಾ ಇತರೆ ನಿರ್ದೇಶನಗಳನ್ನು ನೀಡಲು ಪೀಠ ನಿರಾಕರಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.