ADVERTISEMENT

ಹಕ್ಕುಸ್ವಾಮ್ಯ ಪ್ರಕರಣ | ಇಳಯರಾಜ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 28 ಜುಲೈ 2025, 15:30 IST
Last Updated 28 ಜುಲೈ 2025, 15:30 IST
   

ನವದೆಹಲಿ: ಸಂಗೀತ ಸಂಯೋಜನೆಗೆ ಸಂಬಂಧಿಸಿದಂತೆ ದಾಖಲಾದ ಹಕ್ಕುಸ್ವಾಮ್ಯ ಪ್ರಕರಣವನ್ನು ಬಾಂಬೆ ಹೈಕೋರ್ಟ್‌ನಿಂದ ಮದ್ರಾಸ್‌ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಂಗೀತ ಸಂಯೋಜಕ ಇಳಯರಾಜ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಪ್ರಕರಣದ ವರ್ಗಾವಣೆ ಕೋರಿ ಇಳಯರಾಜ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್‌ ಶಂಕರ್‌ ನಾರಾಯಣನ್‌ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಕೆ.ವಿನೋದ್‌ ಚಂದ್ರನ್‌, ಎನ್‌.ವಿ.ಅಂಜಾರಿಯಾ ನೇತೃತ್ವದ ನ್ಯಾಯಪೀಠವು ನಿರಾಕರಿಸಿದೆ.

‘ಸಂಸ್ಥೆಯು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ಯಾವುದೇ ಪ್ರಕರಣವು ಬಾಕಿ ಉಳಿದಿಲ್ಲ’ ಎಂದು ಸೋನಿ ಮ್ಯೂಸಿಕ್‌ ಎಂಟರ್‌ಟೈನ್‌ಮೆಂಟ್‌ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.‌ ವಾದ ಪುರಸ್ಕರಿಸಿದ ನ್ಯಾಯಾಲಯವು ಇಳಯರಾಜ ಅರ್ಜಿಯನ್ನು ವಜಾಗೊಳಿಸಿತು.

ADVERTISEMENT

2022ರಲ್ಲಿ ಸೋನಿ ಮ್ಯೂಸಿಕ್‌ ಎಂಟರ್‌ಟೈನ್‌ಮೆಂಟ್‌ ಇಂಡಿಯಾ ಸಂಸ್ಥೆಯು ಸಲ್ಲಿಸಿದ್ದ ಮೊಕದ್ದಮೆಯಿಂದ ಕಾನೂನು ಹೋರಾಟ ನಡೆಯುತ್ತಿದೆ. ಇಳಯರಾಜ ಮ್ಯೂಸಿಕ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಯು 536 ಸಂಗೀತ ಕೃತಿಗಳನ್ನು ಬಳಸದಂತೆ ಸೋನಿ ಸಂಸ್ಥೆಯು ತಡೆಯಾಜ್ಞೆ ಕೋರಿದೆ.

1,500ಕ್ಕೂ ಅಧಿಕ ಸಿನಿಮಾಗಳ 7500 ಹಾಡುಗಳಿಗೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.