ADVERTISEMENT

‘ಸುಪ್ರೀಂ’ನಲ್ಲಿ ಎ4 ಹಾಳೆ ಮಾತ್ರ ಬಳಕೆ

ಪಿಟಿಐ
Published 13 ಮಾರ್ಚ್ 2020, 2:51 IST
Last Updated 13 ಮಾರ್ಚ್ 2020, 2:51 IST
   

ನವದೆಹಲಿ:ದೂರು ಮತ್ತು ಪ್ರಮಾಣಪತ್ರಗಳನ್ನು ಎ–4 ಗಾತ್ರದ ಹಾಳೆಗಳಲ್ಲಿ ಮಾತ್ರ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಹಾಳೆಯ ಎರಡೂ ಬದಿಗಳಲ್ಲಿಯೂ ವಿಷಯಗಳನ್ನು ಮುದ್ರಿಸಬೇಕು ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ. ಏಪ್ರಿಲ್‌ 1ರಿಂದ ಇದು ಜಾರಿಗೆ ಬರಲಿದೆ.

ಪರಿಸರ ನಾಶ ತಡೆ ಮತ್ತು ಹಾಳೆ ಬಳಕೆಯಲ್ಲಿ ಏಕರೂಪತೆ ತರುವುದಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಎಲ್ಲ ಹಂತಗಳ ಆಂತರಿಕ ಸಂವಹನದಲ್ಲಿಯೂ ಎ4 ಗಾತ್ರದ ಹಾಳೆಯನ್ನು ಎರಡೂ ಬದಿಗಳಲ್ಲಿ ಮುದ್ರಿಸಿ ಬಳಸುವಂತೆ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಗೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರು ಜ. 14ರಂದೇ ಸೂಚನೆ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.