ADVERTISEMENT

ಜ್ಞಾನವಾಪಿ ಪ್ರಕರಣದ ವಿಚಾರಣೆಗೆ ನಾಳೆ ಪೀಠ ರಚಿಸಲಿದೆ ಸುಪ್ರೀಂ ಕೋರ್ಟ್‌

ಪಿಟಿಐ
Published 10 ನವೆಂಬರ್ 2022, 6:43 IST
Last Updated 10 ನವೆಂಬರ್ 2022, 6:43 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ    

ನವದೆಹಲಿ: ಜ್ಞಾನವಾಪಿ ಕಾಶಿ ವಿಶ್ವನಾಥ ಪ್ರಕರಣದ ವಿಚಾರಣೆಗೆ ಶುಕ್ರವಾರ ಪೀಠ ರಚನೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜ್ಞಾನವಾಪಿ ಮಸೀದಿ ಆವರಣದ ರಕ್ಷಣೆಗೆ ನೀಡಲಾದ ಆದೇಶವನ್ನು ವಿಸ್ತರಿಸುವಂತೆ ಕೋರಲಾಗಿರುವ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೀಗೆ ಹೇಳಿದೆ.

ಹಿಂದೂ ಭಕ್ತರ ಪರ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿದರು. ಆವರಣದ ರಕ್ಷಣೆಗೆ ನೀಡಲಾಗಿರುವ ಆದೇಶವು ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ ಎಂದು ಪೀಠದ ಗಮನಕ್ಕೆ ತಂದರು. ವಕೀಲರ ನೀಡಿದ ಮಾಹಿತಿಯನ್ನು ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠವು ಪರಿಗಣನೆಗೆ ತೆಗೆದುಕೊಂಡಿತು.

ADVERTISEMENT

‘ನಾವು ನಾಳೆ (ನ.11) ಮಧ್ಯಾಹ್ನ 3 ಗಂಟೆಗೆ ಪೀಠ ರಚಿಸುತ್ತೇವೆ’ ಎಂದು ಸಿಜೆಐ ಹೇಳಿದರು.

ವಾರಣಾಸಿಯ ಜ್ಞಾನವಾಪಿ ಆವರಣದೊಳಗಿನ ಪ್ರದೇಶವನ್ನು ಸಂರಕ್ಷಿಸುವಂತೆ ಮೇ 17 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.